ಜಾನುವಾರುಗಳು ರುವಾಂಡದ ಸಂಸ್ಕೃತಿಯ ಒಂದು ಅವಿಭಾಜ್ಯ ಹಾಗೂ ಮುಖ್ಯ ಅಂಗ. ಕಿನ್ಯಾರುವಾಂಡಾ ಭಾಷೆಯಲ್ಲಿ, ,ಗಿರ ಇಂಕಾ, ಎಂದರೆ ‘ನಿಮಗೆ ಒಂದು ದನ ಸಿಗಲಿ’ ಎಂದು, ಅದೇ ರೀತಿ, ‘ ಅಮಾಶ್ಯೋ’ ಎಂದರೆ, ನಿಮಗೆ ‘ಸಾವಿರ ದನಗಳು ದೊರೆಯಲಿ’, ಎಂದೂ ಅರ್ಥ. ಇದು ಒಬ್ಬರು ಇನ್ನೊಬ್ಬರಿಗೆ, ಶುಭಾಶಯ, ಧನ್ಯವಾದ ವ್ಯಕ್ತ ಪಡಿಸುವ ರೀತಿ !
ರುವಾಂಡಾದಲ್ಲಿ ಹೊಸ ಮದುಮಕ್ಕಳಿಗೆ ಕರುವನ್ನು ಉಡುಗೊರೆಯಾಗಿ ನೀಡುವ, ಮದುವೆಯಲ್ಲಿ ದನಗಳನ್ನು ವಧು ದಕ್ಷಿಣೆಯಾಗಿ ಕೊಡುವ ಪರಿಪಾಠವಿದೆ. ಮಕ್ಕಳಿಗೆ ದನಗಳಿಗೆ ಸಂಬಂಧಿಸಿದ ಹೆಸರುಗಳನ್ನೂ ಇಡುತ್ತಾರೆ. ಉದಾ: ‘ಕನ್ಯಾನ’ ಎಂಬ ಹೆಸರಿನ ಅರ್ಥ ಹೆಣ್ಣುಕರು ಎಂದು.. ನನಗೆ ಆಗ ನೆನಪಾದದ್ದು, ನಮ್ಮಲ್ಲಿ ಪ್ರಚಲಿತವಿರುವ, ನಂದಿನಿ, ಸುರಭಿ ಮುಂತಾದ ಹೆಸರುಗಳು ಮತ್ತು ನಮ್ಮ ಇತರ ಪದ್ಧತಿಗಳು.. ಗೃಹಪ್ರವೇಶ ಸಂದರ್ಭದಲ್ಲಿ, ದನವನ್ನು ಮನೆಹೊಕ್ಕಿಸುವುದು ಇತ್ಯಾದಿ…
Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೩” →