ಮನೆಯಲ್ಲಿ ಪಚ್ಚುವಿನ ಉಪನಯನದ ತಯಾರಿ. ಹಾಲ್ ಬುಕಿಂಗ್, ಆಮಂತ್ರಣ ಪತ್ರಿಕೆಯ ವಿನ್ಯಾಸ ಹಾಗೂ ಮುದ್ರಣ, ಆ ನಂತರ ಸಂಬಂಧಿಕರ, ಮಿತ್ರರ ಮನೆಗೆ ಆಹ್ವಾನ, ಕೇಟರಿಂಗ್ ನವರೊಂದಿಗೆ ಭಕ್ಷ ಭೋಜ್ಯಗಳ ಬಗ್ಗೆ ನಿರ್ಣಯ, ವಟುವಿನ ಉಡುಪು-ಅಲಂಕಾರ, ಮನೆಯವರಿಗೆ, ಬಂಧುಗಳಿಗೆ ಬಟ್ಟೆಬರೆ ಎಲ್ಲ ತಯಾರಿಯೂ ಜೋರಾಗಿ ನಡೆದಿತ್ತು.
Continue reading “ಮಗು ಮಾತು;ನಗೆ ತಂತು!-೧”Category: ಸಣ್ಣ ಕತೆ
ನ(ನಿ)ಮ್ಮ ಮನೆ
ಹೊಸದಾಗಿ ಮದುವೆಯಾದ ತಾರಿಣಿಗೆ ಗಂಡನ ಮನೆಯಲ್ಲಿ ಅತ್ತೆಮಾವಂದಿರೊಂದಿಗಿದ್ದು ತನ್ನ ಆಫೀಸು ಕೆಲಸದ ನಿರ್ವಹಣೆ ಮಾತ್ರವಲ್ಲ, ಆ ಮನೆಯ ರೀತಿರಿವಾಜುಗಳನ್ನೂ ಕಲಿಯುವ ಸಂದರ್ಭ. ಚುರುಕಿನ ಹುಡುಗಿ ತಾರಿಣಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮೆಚ್ಚಿನ ಸೊಸೆಯಾಗಿದ್ದಾಳೆ. ಅತ್ತೆ ಮಾವ ಅವಳನ್ನು ಮಗಳೆಂದೇ ಭಾವಿಸಿದ್ದಾರೆ. ಅವಳ ಗಂಡನಿಗೂ ತನ್ನ ಹೆಂಡತಿ ಎಲ್ಲರ ಪ್ರೀತಿ ಪಾತ್ರಳು ಎಂಬ ಹೆಮ್ಮೆ. ‘ನೀನು ಈಗಷ್ಟೆ ಬಂದಿದ್ದೀಯ. ಇಷ್ಟು ಬೇಗ ಎಲ್ಲರನ್ನು ಬುಟ್ಟಿಗೆ ಹಾಕ್ಕೊಂಡಿದ್ದೀಯ’ ಅಂತ ಹೆಂಡತಿಯನ್ನು ಛೇಡಿಸುತ್ತಿರುತ್ತಾನೆ.
Continue reading “ನ(ನಿ)ಮ್ಮ ಮನೆ”ನದೀಪಾತ್ರ
‘ಮನೆಯಲ್ಲೇ ಓದಿಕೊಳ್ಳಿ ಮಕ್ಕಳೇ, ನದಿಯಲ್ಲಿ ಹುಳು ಹುಪ್ಪಟೆ ಕಚ್ಚಬಹುದು, ನೀವು ಸಣ್ಣವರು, ನಿಮ್ಮಷ್ಟಕ್ಕೆೇ ಹೋಗಬೇಡಿ’ ಎನ್ನುತ್ತಿರುವುದನ್ನು ಲೆಕ್ಕಿಸದೆ, ‘ಅಮ್ಮಾ.. ಅಲ್ಲಿ ಕಲ್ಲು ಬಂಡೆಗಳ ಮೇಲೆ ಕುಳಿತು ಓದಿಕೊಳ್ಳುತ್ತೇವೆ ಬಿಡಮ್ಮಾ’
Continue reading “ನದೀಪಾತ್ರ”ನೆಕ್ಕರೆ ಗಿಡದ ತೋಪು!
ರಾತ್ರೆ ಪೂರ್ತಿ ಸುರಿದ ಮಳೆಯ ನೀರ ಹನಿಗಳು ಮರ ಗಿಡ ಹುಲ್ಲುಗಳ ಮೇಲೆ ಪವಡಿಸಿರುವಂತೆ, ಬಾನ ಮೇಲೇರುತ್ತಿರುವ ಸೂರ್ಯನ ಕಿರಣಗಳು ಆ ನೀರ ಗೋಲಗಳನ್ನು ಛೇದಿಸ ಹೊರಟಿದ್ದವು. ಆ ಗೋಲ ಹನಿಗಳೋ ತಮ್ಮೆಡೆಗೆ ತೂರಿ ಬಂದ ಬೆಳಕನ್ನು ಪ್ರತಿಫಲಿಸಿ, ಸ್ಫಟಿಕಗಳೇನೋ ಎಂಬಂತೆ ಹೊಳೆಯುತ್ತಿದ್ದವು. ಮುಂಜಾವಿನ ಈ ಸೌಂದರ್ಯವನ್ನು ಆಸ್ವಾದಿಸಿ ನಾವೆಲ್ಲ ಸಾಗುತ್ತಿರುವಾಗ ಒಬ್ಬರು ಸಂತೋಷದಿಂದ ‘ನೆಕ್ಕರೆ ಗಿಡ.. ನೆಕ್ಕರೆ ಗಿಡ.. ಎಂದಾಗ ಕಂಡದ್ದು ಕಾಡ ಬದಿಯಲ್ಲಿ ಎಲ್ಲೆಡೆ ಸೊಂಪಾಗಿ ಹಬ್ಬಿಕೊಂಡಿರುವ ನೆಕ್ಕರೆ ಗಿಡದ ಪೊದೆಗಳು ಹಾಗೂ ಅವುಗಳ ಮೈತುಂಬ ಹೂಗುಚ್ಛಗಳು
Continue reading “ನೆಕ್ಕರೆ ಗಿಡದ ತೋಪು!”‘ಕೈ ಬಿಡಮ್ಮ’
ಶಾಂತ ಪ್ರಕೃತಿಯ ಅವಳು, ತನ್ನ ಊರಿನ ವರ್ಷಂಪ್ರತಿಯ ರಥೋತ್ಸವದ ಸಮಯ, ಜಾತ್ರೆಯ ಪಟಾಕಿ, ಬೆಂಡು ಬತ್ತಾಸು, ಬಗೆಬಗೆಯ ಊರ- ಪರವೂರಿನ ಟ್ಯಾಬ್ಲೋಗಳು, ಹರಕೆಯ ವೇಷಗಳು, ತಟ್ಟೀರಾಯ, ಕೋಲುಕುದುರೆ, ಅಂಗಡಿ-ತಿಂಡಿ ತಿನಿಸು.. ಜನಜಂಗುಳಿ ಇತ್ಯಾದಿ ಎಲ್ಲವೂ ಮನೆಯ ಎದುರು ರಸ್ತೆಯಲ್ಲೇ ಸಾಗುತ್ತಿದ್ದರೂ ಅಲ್ಲಿ ಹೋಗಬೇಕೆಂದು ಬಯಸಿದ್ದಿಲ್ಲ..ಕಿಟಕಿಯಿಂದಲೇ ಎಲ್ಲವನ್ನೂ ಸ್ವಲ್ಪ ಸಮಯ ವೀಕ್ಷಿಸಿ, ದೇವರಿಗೆ ಅಲ್ಲಿಂದಲೇ ನಮಿಸಿ ಒಳಸರಿಯುತ್ತಿದ್ದದ್ದು ಅವಳ ವಾಡಿಕೆ.
Continue reading “‘ಕೈ ಬಿಡಮ್ಮ’”ಗಡಿಯಾರ ಹೂವು
ಹೂವುಗಳನ್ನು ನೋಡಿದಾಗ ಹೂವಿನಂತೆಯೆ ಮನಸ್ಸೂ ಅರಳುವುದು. ಅವುಗಳ ವಿಶಿಷ್ಟ ಸುಗಂಧವು ಸುತ್ತಲೂ ಹರಡುವಾಗ ವಿಶೇಷ ಅನುಭೂತಿಯಾಗುವುದು.
ಇಂದು ಬೆಳಗ್ಗೆ ಹೂದೋಟದಲ್ಲಿ ಬಳ್ಳಿ ತುಂಬ ಅರಳಿ ನಗುತ್ತಿದ್ದ ಈ ಗಡಿಯಾರ ಹೂವುಗಳನ್ನು ಕಟ್ಟಿ ಮಾಲೆ ಮಾಡುವ ಮನಸ್ಸಾಯಿತು.
Continue reading “ಗಡಿಯಾರ ಹೂವು”ದೂರ..ಆದರೆ ಹತ್ತಿರ!
ಆಕೆಯ ಕಂಪೆನಿಯ ಆಫೀಸು ಒಂದು ‘Melting Pot’ (ಸಮ್ಮಿಳಿತ ಪ್ರದೇಶ). ಭಾರತದ ಬೇರೆ ಬೇರೆ ರಾಜ್ಯಗಳಿಗೆ, ಪ್ರದೇಶಗಳಿಗೆ ಸೇರಿದ ಉದ್ಯೋಗಿಗಳು ಕಂಪೆನಿಯು ತಮಗೆ ವಹಿಸಿದ ಕೆಲಸ ಮಾಡುತ್ತಿರುತ್ತಾ ರೆ. ವೃತ್ತಿ ಬದುಕಿನಲ್ಲಿ ಜೀವನ ನಿರ್ವಹಣೋಪಾಯ, ಮಾತ್ರವಲ್ಲ ಜ್ಞಾನ ಸಂಪಾದನೆ, ಸಹ ಉದ್ಯೋಗಿಗಳೊಂದಿಗೆ ಪರಸ್ಪರ ಸಹಕಾರ, ಸ್ನೇಹಭಾವ, ವಿನೋದ, ಹೀಗೆ ಅನೇಕ ಅರ್ಥವತ್ತಾದ ಕ್ಷಣಗಳು ನಿರ್ಮಾಣವಾಗುತ್ತಿರುತ್ತವೆ. ಅವಳು ಅಂತಹ ಗಳಿಗೆಗಳನ್ನು ಬೆರಗಿನಿಂದ ಆಸ್ವಾದಿಸುವುದುಂಟು.
Continue reading “ದೂರ..ಆದರೆ ಹತ್ತಿರ!”ಲಕ್ನೋ ಶೂ
ಯುವಜೋಡಿಯೊಂದು ದಕ್ಷಿಣ ಭಾರತದಿಂದ ಉತ್ತರಭಾರತಕ್ಕೆ ವಿಹಾರ ಹೊರಟಿತ್ತು. ಪ್ರಯಾಣದ ಸಂತೋಷ, ಸುತ್ತಲಿನ ವಿವಿಧ ನೋಟಗಳು, ವೈವಿಧ್ಯಗಳು, ಪ್ರಾದೇಶಿಕ ವೈಶಿಷ್ಟ್ಯತೆಗಳು, ಇವೆಲ್ಲವನ್ನು ಅನುಭವಿಸುತ್ತ ಉತ್ತರಪ್ರದೇಶದ ಲಕ್ನೋ ವಿಮಾನ ನಿಲ್ದಾಣ ತಲುಪಿದಾಗ ಸಂಜೆಯಾಗಿತ್ತು. ವಿಮಾನ ನಿಲ್ದಾಣದಲ್ಲಿ ಟಾಕ್ಸಿಗೆ ಮುಂಗಡ ನೀಡಿ , ಮೊದಲೇ ಕಾಯ್ದಿರಿಸಿದ್ದ ಹೊಟೆಲ್ ನಲ್ಲಿ ಲಗೇಜು ಇಟ್ಟು, ಸ್ವಲ್ಪ ಕತ್ತಲಾವರಿಸಿದ್ದರೂ…ಪರವಾಗಿಲ್ಲ…..ಒಂದು ಸುತ್ತು ಊರು ನೋಡಿ ಬರೋಣ ಎಂದುಕೊಂಡು ಹೊರಟರು.
Continue reading “ಲಕ್ನೋ ಶೂ”ದತ್ತು(adoption)-ದತ್ತ(taken for granted)
ಅಂದು ಆಕೆಯನ್ನು ಅದೇ ಪರಿಸರದಲ್ಲಿರುವ ಸ್ನೇಹಿತೆ ತನ್ನ ಮಗಳ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದಳು. ಕಳೆದ ಎರಡು ವರ್ಷ ಸಹ ಆಹ್ವಾನಿಸಿದ್ದಳಾದರೂ ಕೆಲಸದಲ್ಲಿ ಪರ ಊರಿಗೆ ವರ್ಗಾವಣೆಯಾಗಿದ್ದುದರಿಂದ ಆ ಹುಟ್ಟುಹಬ್ಬದ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿರಲಾಗಲಿಲ್ಲ. ಈ ಸಲ ಊರಲ್ಲೇ ಇದ್ದೀ..ಬರದಿದ್ದರೆ ನೋಡು ಅಂತ ಅದಾಗಲೇ ಸ್ನೇಹಿತೆ ಸಲಿಗೆಯಲ್ಲಿ ಎಚ್ಚರಿಕೆ ನೀಡಿದ್ದಳು!.
Continue reading “ದತ್ತು(adoption)-ದತ್ತ(taken for granted)”ರುವಾಂಡಾ ದೇಶ ಪರ್ಯಟನೆಯ ಮೆಲುಕು-೬
ರುವಾಂಡಾ ದೇಶ ಪರ್ಯಟಣೆಯ ಸಂದರ್ಭ, ನನ್ನ ಮನ ಚಿತ್ರಿಸಿಕೊಂಡ ಚಿತ್ರಗಳನ್ನು ಕಳೆದ ಐದು ಸಂಚಿಕೆಗಳಲ್ಲಿ ವಾಕ್ಯಗಳಾಗಿಸಿ ತಮ್ಮ ಮುಂದಿರಿಸಿದ್ದೆ. ಎಲ್ಲವೂ ಹೇಳಿಯಾಯಿತು ಎಂದು ಎಣಿಸುತ್ತಿರುವಾಗ ಆಳದಲ್ಲಿ ಹುದುಗಿದ್ದ ಕೆಲವು ಚಿತ್ರಗಳು ಚಿತ್-ಪರದೆಯ ಮೇಲೆ ಗೋಚರವಾಗುತ್ತಿವೆ.
Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೬”