There is a saying ‘Icing on the cake’ in English. For this, the phrase ‘like ghee on the Holige’ can be compared. Here’s why, nature’s wonders during Ratnagiri tour, Maharashtra’s finest snacks, frequently made by his son and his friend have increased the joy of the tour.
Continue reading “The secret of a gem!!! Part – 2”Category: ಸಣ್ಣ ಕತೆ
ರತ್ನಾಗಿರಿಯ ರಹಸ್ಯ!!! ಭಾಗ-೩
ಎರಡನೆಯ ದಿನದ ಮಧ್ಯಾಹ್ನ, ಗಣಪತಿ ಫುಲೆಯಿಂದ ಮುಂದಕ್ಕೆ, ‘ಕೋಳಿಸರೆ’ ಎಂಬ ಪ್ರಕೃತಿಯ ಆಡುಂಬೊಲವೆಂಬಂತೆ ಮೇಳೈಸುವ ತಗ್ಗು ಪ್ರದೇಶದಲ್ಲಿರುವ ಲಕ್ಷ್ಮೀಕೇಶವ ದೇವಳಕ್ಕೆ, ಮುಂದೇನು? ಮುಂದೇನು? ಎಂದು ಆಸಕ್ತಿ ಹುಟ್ಟಿಸುವ ಮೆಟ್ಟಲುಗಳನ್ನು ಇಳಿಯುತ್ತ ಹೋದೆವು. ಅಲ್ಲಿ ಸುರಿಯುತ್ತಿದ್ದ ಮಳೆ, ಹಕ್ಕಿಗಳ ಕಲರವ, ದೇವಳದ ಬದಿಯಲ್ಲಿ ಹರಿಯುವ ತೆೊರೆಯ ಜುಳುಜುಳು ನಿನಾದ, ಇವುಗಳಿಗೆ ನಾವು ತೆರೆದುಕೊಳ್ಳುತ್ತ ಮುಂದೆ ಮುಂದೆ ಹೋದರೆ, ಮೊದಲ ನೋಟಕ್ಕೆ ಮಾನವರಾರೂ ಕಾಣಲಿಲ್ಲ. ಸ್ವಲ್ಪ ಹೆೊತ್ತಿನ ನಂತರ, ಅನನ್ಯ ಪ್ರಶಾಂತತೆ ಹೊಂದಿರುವ ಮುಖಮುದ್ರೆಯ ಅರ್ಚಕರನ್ನು ಕಂಡಾಗ ಒಮ್ಮೆಗೆ, ಇವರೊಬ್ಬರೇ ಇಲ್ಲಿ… ಯಾವ ಭೀತಿಯೂ ಇಲ್ಲದೆ ಹೇಗೆ ಇದ್ದಾರೆ ಎನಿಸಿತ್ತು. ಮರುಕ್ಷಣದಲ್ಲೇ ಆ ಪರಿಸರದ ವಿಶಿಷ್ಟ ಶಾಂತಿ , ನಮ್ಮನ್ನೂ ಆವರಿಸಿ, ಅಲೌಕಿಕ ಆನಂದ ಪರವಶವಾಗಿಸಿತ್ತು. ಆ ನಂತರ ನಮ್ಮ ಗಮನ, ವಾಡೇಶ್ವರದ ಈಶ್ವರ ಮಂದಿರಕ್ಕೆ. ಕಾರಿನಲ್ಲೇ ಫೆರಿಯನ್ನೇರಿ ಸಮುದ್ರದ ಮೂಲಕ ನಾವು ಅಲ್ಲಿಗೆ ಹೋಗಿ ಬಂದದ್ದು ರೋಚಕವಾಗಿತ್ತು. ಪೇಟೆಯ ನಡುವೆ ಇರುವ ವಾಡೇಶ್ವರ ದೇವಸ್ಥಾನ ಬಹಳ ಜನರು ಸೇರಿ ನಡೆಸುತ್ತಿದ್ದ ಧಾರ್ಮಿಕ ಪಠಣ ಇತ್ಯಾದಿಗಳಿಂದ ವಿಭಿನ್ನ ಅನುಭವ ನೀಡಿತ್ತು.
Continue reading “ರತ್ನಾಗಿರಿಯ ರಹಸ್ಯ!!! ಭಾಗ-೩”ರತ್ನಾಗಿರಿಯ ರಹಸ್ಯ!!! ಭಾಗ-೨
ಕಸಬಾದ ಸಂಗಮೇಶ್ವರದಲ್ಲಿ ಪರಿಸರದೊಂದಿಗೆ ಏಕೋಭಾವಗೊಂಡ ಭಾವನೆ. ನೋಡಿದಷ್ಟು ಉದ್ದಕ್ಕೂ ಹರಿಯುತ್ತಿರುವ ನದಿಯ ನೀರು. ಅಂಚಿಗೆ ಉದ್ದಕ್ಕೂ ಹಬ್ಬಿರುವ ಮೇರು, ಅದರ ಮೇಲೆ ಕಣ್ತಣಿಸುವ ಹಸಿರಿನ ಪೈರು.
Continue reading “ರತ್ನಾಗಿರಿಯ ರಹಸ್ಯ!!! ಭಾಗ-೨”ರತ್ನಾಗಿರಿಯ ರಹಸ್ಯ!!! ಭಾಗ-೧
ಮೇಲಿನ ಪದಪುಂಜ ಯಾವುದೋ ಪತ್ತೇದಾರಿ ಕಾದಂಬರಿಯ ಶೀರ್ಷಿಕೆಯಂತೆ ನಿಮಗೆ ಎನಿಸುವುದು ಸಹಜ!. ಕೊಂಕಣ ಪ್ರದೇಶದಲ್ಲಿರುವ ಮಹಾರಾಷ್ಟ್ರದ ‘ರತ್ನಾಗಿರಿ’ ಹಾಗೂ ಸಮೀಪದ ಭೂಭಾಗಗಳಿಂದ ನಮ್ಮ ಮನೆತನಗಳ ಪೂರ್ವಜರು ಹಲವು ನೂರು ವರ್ಷಗಳ ಹಿಂದೆ ವಲಸೆ ಬಂದು ಅವಿಭಜಿತ ದಕ್ಷಿಣಕನ್ನಡ ಹಾಗೂ ಆಸುಪಾಸಿನ ಕಾಡಂಚುಗಳಲ್ಲಿ ನೆಲೆಸಿದ್ದು, ಅದು ಹೇಗೆ ಸಾಧ್ಯವಾಯಿತು, ಅವರು ಇಲ್ಲಿ ಅದ್ಹೇಗೆ ಹೊಂದಿಕೊಂಡಿರಬಹುದು,ಕಾಡು ಬದಿಯನ್ನೇ ಅವರು ಯಾಕೆ ಆಯ್ಕೆ ಮಾಡಿಕೊಂಡರು ಎಂಬುದು ಬಹಳ ರಹಸ್ಯಮಯವಾಗಿ ತೋರಿ ನನ್ನನ್ನು ಅನೇಕ ಸಲ ಕಾಡಿದ್ದುಂಟು. ಅದಕ್ಕೆಂದೇ ರತ್ನಾಗಿರಿಯ ನನ್ನ ಪ್ರವಾಸ ಕಥನಕ್ಕೆ ಈ ಶೀರ್ಷಿಕೆ
Continue reading “ರತ್ನಾಗಿರಿಯ ರಹಸ್ಯ!!! ಭಾಗ-೧”ಇದೇನು ಮಹಾ ! ದೊಡ್ಡ ಕುಂಬಳಕಾಯಿ
ಇವತ್ತಿನ ಈ ಪೋಸ್ಟ್ ನ ಶೀರ್ಷಿಕೆಯು ಸಣ್ಣ ವಿಷಯವನ್ನು ದೊಡ್ಡದು ಮಾಡುವುದಕ್ಕೆ ಲಾಗಾಯ್ತಿನಿಂದ ಹೇಳುವ ಒಂದು ವಿಡಂಬನಾತ್ಮಕ ಕಮೆಂಟ್ ಆಗಿದೆ. ಕುಂಬಳಕಾಯಿ ಒಂದು ಸೃಷ್ಠಿ ವಿಶೇಷ ಎನ್ನುವುದನ್ನು ಈ ಕಮೆಂಟ್ ಸಾರುತ್ತದೆ. ನಾನು ಹೇಳಹೊರಟಿರುವುದು ಬಳ್ಳಿಯೊಂದರಲ್ಲಿ ಕುಂಬಳದ ಕಾಯಿಗಳು ಹುಟ್ಟಿ ಬೆಳೆದು, ಮೂಡಿಸಿದ ಬೆರಗಿನ ಬಗ್ಗೆ.
Continue reading “ಇದೇನು ಮಹಾ ! ದೊಡ್ಡ ಕುಂಬಳಕಾಯಿ”ಕೊದನೆ
‘ಕೊದನೆ’ ಎಂದು ಬಹಳಷ್ಟು ಕಡೆ ಕರೆಯಲ್ಪಡುವ, ಈ ‘ಕಾಡು ಬದನೆ’ ಗಿಡ ನಮ್ಮ ಪರಿಸರದಲ್ಲಿ ಅಲ್ಲಲ್ಲಿ ಕಂಡು ಬರುವುದು. ಹಿತೋಷ್ಣ ವಾತಾವರಣದಲ್ಲಿ ಈ ಗಿಡ ಎತ್ತರಕ್ಕೆ ಬೆಳೆದು, ಗೊಂಚಲು ಗೊಂಚಲಲ್ಲಿ, ಸಣ್ಣ ಸಣ್ಣ ಹೂವು ಕಾಯಿಗಳನ್ನು ನೀಡುವುದು. ಆಕಾರ, ಬಣ್ಣಗಳಲ್ಲಿ ಬದನೆಗಳನ್ನು ಹೋಲುವ ಈ ಸಣ್ಣ ಕಾಯಿಗಳಿಂದ ಚಟ್ನಿ ಮುಂತಾದುವುಗಳನ್ನು ಮಾಡಬಹುದು. ಅನೇಕ ವಿಟಮಿನ್ ಗಳ ಆಗರವಾಗಿರುವ ಈ ಕಾಡು ತರಕಾರಿಯನ್ನು ನಾವು ಹೆಚ್ಚೇನೂ ಉಪಯೋಗಿಸುತ್ತಿಲ್ಲ.
Continue reading “ಕೊದನೆ”ನನ್ನೂರಿಗೇ ನಾನು ಪ್ರವಾಸ ಹೋದಾಗ!-೪ನೇ ಹಾಗೂ ಕೊನೆಯ ಕಂತು
ವರಂಗ ಕ್ಷೇತ್ರ ಮೂಡಿಸಿದ ವಿಶೇಷ ಭಾವತರಂಗಗಳೊಡನೆ ಕಾರನ್ನೇರಿ ನಾವು ಕಾರ್ಕಳಕ್ಕೆ ಹಿಂದಿರುಗಿ, ಆ ರಸ ನಿಮಿಷಗಳನ್ನೆಣಿಸುತ್ತ ಮಧ್ಯಾಹ್ನದ ಭೋಜನವನ್ನು ಉಪಾಹಾರಗೃಹವೊಂದರಲ್ಲಿ ಸವಿದೆವು. ಆ ನಂತರ ಮೊದಲೇ ನಿರ್ಣಯಿಸಿದಂತೆ ನಾವೆಲ್ಲ ಕಾಲೇಜು ಶಿಕ್ಷಣ ಪಡೆದ ಭುವನೇಂದ್ರ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ಬಲು ಮೆಲ್ಲಮೆಲ್ಲನೆ ಸಾಗಿದೆವು. ಹೊರಗೆ ಸುರಿಯುತ್ತಿದ್ದ ಮಳೆಯನ್ನು ಮೇಲೇರಿಸಿದ ಕಾರಿನ ಗಾಜಿನ ಕಿಟಕಿಯೊಳಗಿಂದ ನೋಡುತ್ತಲಿದ್ದರೆ.. ಮನದಲ್ಲಿ ಆ ಪರಿಸರದಲ್ಲಿ ಗೌರವಾನ್ವಿತ ಗುರುವೃಂದದೊಂದಿಗೆ, ಸಲಿಗೆಯ ಸ್ನೇಹವರ್ಗದೊಂದಿಗೆ ಕಳೆದ ಕಾಲೇಜು ದಿನಗಳ ನೆನಪಿನ ಸುರಿಮಳೆ!
Continue reading “ನನ್ನೂರಿಗೇ ನಾನು ಪ್ರವಾಸ ಹೋದಾಗ!-೪ನೇ ಹಾಗೂ ಕೊನೆಯ ಕಂತು”ನನ್ನೂರಿಗೇ ನಾನು ಪ್ರವಾಸ ಹೋದಾಗ!-೩
ಕಳೆದ ವಾರ, ನಮ್ಮ ಅಸ್ಮಿತೆಯ ಹೆಗ್ಗುರುತಾದ, ‘ತಿರಂಗ’ ಉತ್ಸವದ ಉತ್ಸಾಹದಲ್ಲಿ ತೇಲಿಹೋಯಿತು. ಮನಸ್ಸು ಅದರಲ್ಲಿ ತಲ್ಲೀನವಾಯಿತು. ಆದುದರಿಂದ ನಮ್ಮೂರಿನ ನನ್ನ ಪ್ರವಾಸದಲ್ಲಿ ‘ವರಂಗ’ ಎಂಬ ಅತಿ ಸುಂದರ, ಸರೋವರದ ಮಧ್ಯೆ ಕಂಗೊಳಿಸುವ ಬಸದಿಯ ಪರಿಸರಕ್ಕೆ ಹೋದ ಕತೆಯನ್ನು ಈ ವಾರ ಹಂಚಿಕೊಳ್ಳುತ್ತಿರುವೆ
Continue reading “ನನ್ನೂರಿಗೇ ನಾನು ಪ್ರವಾಸ ಹೋದಾಗ!-೩”ನನ್ನೂರಿಗೇ ನಾನು ಪ್ರವಾಸ ಹೋದಾಗ! –
ಮುಂಡ್ಲಿಯಿಂದ ಮುಂದೆ..
ಮನಸ್ಸಿಲ್ಲದ ಮನಸ್ಸಿನಿಂದ ಮುಂಡ್ಲಿಯಿಂದ ಮುಂದಡಿಯಿಟ್ಟು ಕೊನೆಯ ಬಾರಿ ಎಂಬಂತೆ ಹಿಂದಿರುಗಿ ಸುತ್ತಲೂ ನೋಡಿದಾಗ ತನ್ನಷ್ಟಕ್ಕೆ ವ್ಯಸ್ತ ಸ್ವರ್ಣಾನದಿ ಹರಿಯುತ್ತಲೇ ಇದ್ದಳು. ನೆಟ್ಟ ಮನಸ್ಸನ್ನು ಅಲ್ಲಿಂದ ಕಿತ್ತು, ಕತ್ತು ಮುಂದೆ ಸರಿಸಿದಾಗ ಸುತ್ತಲೂ ಪಸರಿಸಿರುವ ಸಸ್ಯಸಂಕುಲದ ನಡುವಿನ ರಸ್ತೆಯ ಮೇಲೆ ಕಾರು ಸಾಗುತ್ತಿತ್ತು. ಕಾರು ಚಾಲಕ, ಮಾರ್ಗದರ್ಶಕರ ನಡುವೆ ಮುಂದಿನ ತಾಣದ ಬಗ್ಗೆ ಸಂಭಾಷಣೆ ನಡೆಯುತ್ತಿರುವಂತೆಯೆ ಶಿರ್ಲಾಲಿನ ಸಿದ್ಧಗಿರಿ ಕ್ಷೇತ್ರ ಸೇರಿದ್ದೆವು.
Continue reading “ನನ್ನೂರಿಗೇ ನಾನು ಪ್ರವಾಸ ಹೋದಾಗ! –”ನನ್ನೂರಿಗೇ ನಾನು ಪ್ರವಾಸ ಹೋದಾಗ!
ನಮ್ಮೂರ ಮಣ್ಣ ವಾಸನೆ ನಮಗೆ ಪ್ರಿಯ. ಊರು ಬದಿಗೆ ಹೋದಾಗ, ನಾವು ಬಾಲ್ಯ ಹಾಗೂ ನವತಾರುಣ್ಯದ ದಿನಗಳನ್ನು ಸವಿದ ಮನೆ, ಶಾಲೆ, ಕಾಲೇಜು, ಲೈಬ್ರೆರಿ, ಆ ದಿನಗಳಲ್ಲಿ ಪ್ರಯಾಣಿಸುತ್ತಿದ್ದ ಬಸ್, ಸಿನೆಮಾ ನೋಡುತ್ತಿದ್ದ ಥಿಯೇಟರ್, ಮಸಾಲೆದೋಸೆ ತಿನ್ನುತ್ತಿದ್ದ ಹೋಟೆಲ್, ಚುರುಮುರಿ ಪಚಡಿ ತಿನ್ನುತ್ತಿದ್ದ ಜಾಗೆ, ಬಳೆ -ಕ್ಲಿಪ್ ಅಂಗಡಿ, ಇವುಗಳ ಬಗ್ಗೆ ಒಂದಲ್ಲ, ಎರಡಲ್ಲ ಸಾವಿರ ನೆನಪುಗಳು ಸುಳಿದು ಮನಸ್ಸು ಒದ್ದೆಯಾಗುತ್ತಿರುತ್ತದೆ. ಆದರೆ ಊರು ಬಿಟ್ಟು ಈಚೆ ಬಂದಮೇಲೆ ಅಲ್ಲಿಗೆ ಹೋಗುವುದು ಸಮಾರಂಭಗಳಿಗೆ, ಬಂಧುಗಳ ಭೇಟಿಗೆ ಸೀಮಿತವಾಗುತ್ತದೆ.
Continue reading “ನನ್ನೂರಿಗೇ ನಾನು ಪ್ರವಾಸ ಹೋದಾಗ!”