Posted in ಕವನ

ಹೊಸ ಪಚ್ಚೆ ಸೀರೆ

ಬಾಂದಳದಿಂ ಸುರಿದಿದೆ ಸೋನೆಮಳೆ ಧಾರೆ ಜಳಕವಾಡುತ ಕೊಳೆಕಳೆದು ಲಕಲಕಿಸಿದೆ ಧರೆ

ವರುಣ ನೀಡಿದ ಭೂತಾಯ್ಗೆ ಹೊಸಪಚ್ಚೆ ಸೀರೆ

ಸಂಭ್ರಮಿಸಿಹಳು ಅಮ್ಮ ಧರಿಸಿ ಹಸಿರುಡುಗೊರೆ

ನವಪತ್ತಲದ ಮೈತುಂಬ ಪಚ್ಚೆತೆನೆ ಸಿರಿಯು

Continue reading “ಹೊಸ ಪಚ್ಚೆ ಸೀರೆ”
Posted in ಕವನ

ಹೇಗೆ ಹೇಳಲಿ ನಿನಗೆ…

‘ಬಹಳ ಇಷ್ಟವು ಎನಗೆ ಮೈಸೂರು ಮಲ್ಲಿಗೆ’

ಉಸುರಿದಳಾಕೆ ಸಹಜ ಮಾತು ಮಾತಲ್ಲಿ..

ನಸುಕಲ್ಲೆ ಹೊರಟನಾತ ದೂರ ಮೈಸೂರಿಗೆ

ತುಸು ಕೆಲಸಗಳಿವೆ ಎಂದು ಕೂಡಿಸುತ ಕಣ್ಣಾಲಿ..

Continue reading “ಹೇಗೆ ಹೇಳಲಿ ನಿನಗೆ…”
Posted in ಕವನ

ಗಾಂಭೀರ್ಯ

ತುಟಿಯಂಚಲ್ಲಿ ನೀನಡಗಿಸಿದ ನಲ್ನುಡಿಯನ್ನ

ಕಣ್ಣ‌ಮಿಂಚಲ್ಲಿ ಗುರುತಿಸಿಯೆ ಬಿಟ್ಟಿಹೆ ನಾ

ಮಾತನಾಡೋ ಇನಿಯ ಏಕಿಂಥ ಬಿಗುಮಾನ

ಹೇಳದಿದ್ದರೂ ಸ್ಪಷ್ಟ ಬಚ್ಚಿಟ್ಟ ಪ್ರೀತಿ-ಅಭಿಮಾನ!

Continue reading “ಗಾಂಭೀರ್ಯ”