ಹಳ್ಳಿಯೊಂದರ ಚಿಣ್ಣರಲ್ಲಿ
ಶಾಲೆಗ್ಹೋಗುವ ಸಂಭ್ರಮ
ಸಾಲುಸಾಲಲಿ ಸಾಗ್ವರಿವರು
Continue reading “ನಮ್ಮ ಗುರುಕುಲ ಶಾಲೆ”ಗಂಗಾನದಿಯ ದಡದಲ್ಲಿರುವ ಕ್ಷೇತ್ರದರ್ಶನ ಕ್ಕೆಂದು ಒಂದು ವಾರದ ಕೆಳಗೆ ಉತ್ತರಭಾರತದ ಆ ಪ್ರದೇಶಕ್ಕೆ ಬಂದಿದ್ದ ಆಕೆ ಇಂದು ಆ ಊರಿನ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬಂದು ನಂತರ ತನ್ನೂರಿಗೆ ಇನ್ನೊಂದು ವಿಮಾನದಲ್ಲಿ ಹೋಗುವವಳಿದ್ದಳು. ಗಂಗಾ ನದಿಯ ದಡದ ಪ್ರಶಾಂತತೆ, ಅಲ್ಲಿನ ರಮಣೀಯ ನೋಟಗಳು, ಆಧ್ಯಾತ್ಮಿಕ ಕೇಂದ್ರಗಳು.. ಅವಳಿಗೆ ಸಂತೋಷ ಕೊಟ್ಟಿದ್ದವು. ಸಾರ್ಥಕ ಭಾವದಿಂದ ಅಂದು ಮರುಪ್ರಯಾಣ ಆರಂಭವಾಗಿತ್ತು. ಆ ದಿನ ಬೆಳಗ್ಗೆ ಬೇಗನೆ ನಾಲ್ಕು ಗಂಟೆಗೆ ಎದ್ದು ತಯಾರಾಗಿ ವಿಮಾನ ನಿಲ್ದಾಣ ತಲುಪಿ ಅಲ್ಲಿನ ಭದ್ರತಾ ತಪಾಸಣೆಗಳನ್ನು ಮುಗಿಸಿ ಪ್ರಯಾಣದ ಆರಂಭ.
Continue reading “ಗಗನ ಸಖ್ಯ”‘ನಾನಂತೂ ದಿನಾ ಇತ್ತೀಚೆಗೆ ಬೆಳಿಗ್ಗೆ ಬ್ರೇಕ್ಫಾಸ್ಟ್ ಗೆ ಓಟ್ಸ್ ತಿನ್ನೋದು..ದಿನೇ ದಿನೇ ಹೆಚ್ಚುವ ದೇಹದ ತೂಕ ಇಳಿಸುವುದಕ್ಕೆ ಇದು ಬಹಳ ಒಳ್ಳೆಯದಂತೆ ನೋಡು..ಅದೂ ಅಲ್ಲದೆ ಅದರಲ್ಲಿ ತುಂಬಾ ಫೈಬರ್ ಇರೋದ್ರಿಂದ ದೇಹಕ್ಕೆ ಇತರ ಪ್ರಯೋಜನಗಳೂ ಇವೆ..ಕೊಲೆಸ್ಟರಾಲ್ ನಿಯಂತ್ರಣ, ಸಕ್ಕರೆ ಕಾಯಿಲೆ ಹತೋಟಿ ಇತ್ಯಾದಿಗಳಿಗೂ ಇದು ರಾಮಬಾಣವಂತೆ..ನೀನೂ ಮಾಡು..ದಿನಾ ತಿಂಡಿಗೇನು.. ಇಡ್ಲಿ ..ದೋಸೆಗೆ ಅಕ್ಕಿ ಉದ್ದು ನೆನೆಸೋ ಕಡಿಯೋ ಯೋಚನೇನೂ ಇರೋದಿಲ್ಲ’…
Continue reading “ಡಯಟ್ ರೆಸಿಪಿ!!!!!”ಆ ಮನೆಯಲ್ಲಿ ಅಂದು ಕುಟುಂಬ ಹಿರಿಯ ಕಿರಿಯ ಸದಸ್ಯರೆಲ್ಲ ಒಟ್ಟು ಸೇರಿದ್ದರು. ಯಜಮಾನ ಅಪ್ಪಣ್ಣಯ್ಯ..ಅವರ ಕುಟುಂಬ. ಅಣ್ಣ ತಮ್ಮ ಇವರ ಹೆಂಡಂದಿರು..ಅಕ್ಕ ತಂಗಿಯರು.. ಅವರ ಗಂಡಂದಿರು, ಮಕ್ಕಳು, ಮೊಮ್ಮಕ್ಕಳು ಸೇರಿ ಸುಮಾರು ಐವತ್ತು ಜನ ಆಗುತ್ತಾರೆ..ಆ ದಿನದ ಸಂಭ್ರಮಾಚರಣೆಯ ಕಾರಣ, ಅಪ್ಪಣ್ಣಯ್ಯನವರ ತಂಗಿ ಕಾವೇರಮ್ಮ ಗಳಿಸಿದ್ದ ಕಾನೂನಾತ್ಮಕ ಹೋರಾಟದ ಗೆಲುವು.. ಇಪ್ಪತ್ತು ವರುಷಗಳ ಕೆಳಗೆ ಬಸ್ ಪ್ರಯಾಣದ ವೇಳೆ ಕಾಲಿಗೆ ತೀವ್ರ ಪೆಟ್ಟಾಗಿ ಸುಮಾರು ಒಂದು ವರುಷದ ಶುಶ್ರೂಷೆಯ ನಂತರ ಆಕೆ ಸ್ಟ್ರೆಚರ್ ನೆರವಿನಲ್ಲಿ ನಡೆಯುವಂತಾದದ್ದು.. ಅಪಘಾತದ ವಿಮಾ ಪರಿಹಾರಕ್ಕೆ, ಹದಿನೈದು ವರ್ಷ ಕೋರ್ಟ್ ಕೇಸ್ ನಡೆದು ರೂಪಾಯಿ ಇಪ್ಪತ್ತೈದು ಲಕ್ಷ ಈಗ ಕಾವೇರಮ್ಮನಿಗೆ ದೊರೆತಿದೆ. ಕುಟುಂಬದವರ ನಿರಂತರ ಸಹಕಾರ, ಆರೈಕೆ, ಬೆಂಬಲದಿಂದ ಕಾವೇರಮ್ಮ, ತಮ್ಮ ಕೆಲಸ ಮಾಡುವಷ್ಟು ಚೇತರಿಸಿ ಕುಟುಂಬದವರ ಸಂತೋಷಕ್ಕೆ ಕಾರಣವಾಗಿದ್ದಾರೆ..
Continue reading “ಕೂಡಿ ಬಾಳೋಣ”I feel suffocated
At times, in your affinity
When I am on my own
Continue reading “A Poem- Love Vs Space”ನಿನ್ನ ಪ್ರೀತಿಯ ಛತ್ರಛಾಯೆಯಲಿ
ಗಣಿಸದೆ ಉರಿಬಿಸಿಲು ಜಡಿಮಳೆ ಬಿರುಗಾಳಿ
ಗುನುಗುತ್ತ ಹಾಡುತ್ತ ಸಂತಸದ ಚೆನ್ನುಲಿ
Continue reading “ಛತ್ರಛಾಯೆ”ಬಾಂದಳದಿಂ ಸುರಿದಿದೆ ಸೋನೆಮಳೆ ಧಾರೆ ಜಳಕವಾಡುತ ಕೊಳೆಕಳೆದು ಲಕಲಕಿಸಿದೆ ಧರೆ
ವರುಣ ನೀಡಿದ ಭೂತಾಯ್ಗೆ ಹೊಸಪಚ್ಚೆ ಸೀರೆ
ಸಂಭ್ರಮಿಸಿಹಳು ಅಮ್ಮ ಧರಿಸಿ ಹಸಿರುಡುಗೊರೆ
ನವಪತ್ತಲದ ಮೈತುಂಬ ಪಚ್ಚೆತೆನೆ ಸಿರಿಯು
Continue reading “ಹೊಸ ಪಚ್ಚೆ ಸೀರೆ”ಕೊರೋನಾ ಕಾರಣ ನಗರಾಡಳಿತ ಊರಿನಲ್ಲಿ ಬಂದ್ ಆಜ್ಞೆ ನೀಡಿತ್ತು. ಅದರಂತೆ, ವಾರದ ದಿನಗಳಲ್ಲಿ ಬೆಳಿಗ್ಗೆ ಆರರಿಂದ ಒಂಬತ್ತರವರೆಗೆ ದಿನನಿತ್ಯೋಪಯೋಗಿ ಸಾಮಾನು ಖರೀದಿಗೆ ಅವಕಾಶ. ಪೋಲಿಸ್ ಇಲಾಖೆಯವರು ದಂಡ ಹಾಕುವುದರಿಂದ ಒಂಭತ್ತು ಗಂಟೆಗೆ ಸರಿಯಾಗಿ ಎಲ್ಲ ಅಂಗಡಿಯವರು ಬಾಗಿಲು ಹಾಕುತ್ತಾರೆ. ಕಲ್ಪನಾ ಪಟ್ಟಿ ಮಾಡಿಕೊಂಡು, ಬೆಳಿಗ್ಗೆ ಬೇಗನೆ ಹೋಗಿ ಒಂದು ವಾರಕ್ಕೆ ಬೇಕಾಗುವ ಸಾಮಾನು ತರುತ್ತಾಳೆ. ಈ ಸಲ ಹಾಗೆ ಹೋಗುವಾಗ ಮೆಡಿಕಲ್ ಶಾಪ್ ಗೂ ಭೇಟಿಕೊಟ್ಟು ತಂದೆ ತಾಯಿಗೆ ಬೇಕಾಗುವ ಬಿ.ಪಿ., ಶುಗರ್ ಮಾತ್ರೆಗಳು ಹಾಗೂ ತನಗೆ ಆಫೀಸಿನಲ್ಲಿ ಬೇಕಾಗುವ ಸಾನಿಟೈಸರ್ ಖರೀದಿಗೆ ಅಂತ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ ಪರಿಚಿತರ ಮೆಡಿಕಲ್ ಶಾಪಿಗೆ ಹೋಗಿದ್ದಾಳೆ.
Continue reading “ಇಂತಹವರೂ ಇದ್ದಾರೆ”ಅದು ಯುನಿವರ್ಸಿಟಿಯ ಮೊದಲ ಸೆಮಿಸ್ಟರ್ ನ ಪರೀಕ್ಷೆ ಮುಗಿದು, ನಂತರದ ಸೆಮಿಸ್ಟರ್ ನ ನಡುವಿನ ರಜಾಕಾಲ ಆರಂಭದ ದಿನ. ಅಮೇರಿಕಾದ ನ್ಯೂಯಾರ್ಕ್ ನಿಂದ ಸುಮಾರು ನೂರು ಕಿ. ಮೀ. ದೂರದಲ್ಲಿರುವ ಲಾಂಗ್ ಐಲಾಂಡ್ ಎಂಬಲ್ಲಿ ಶಿಖಾ ಕಲಿಯುತ್ತಿದ್ದ ಯುನಿವರ್ಸಿಟಿ ಇದೆ. ಮೊದಲ ಬಾರಿಗೆ ತಾಯ್ನಾಡು ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ, ಹೊಸ ಪರಿಸರದಲ್ಲಿ ,ಶಿಖಾ ಶಿಕ್ಷಣ ಪಡೆಯುತ್ತಿದ್ದಾಳೆ. ಅಲ್ಲಿನ ಹೊಸ ಕಲಿಕಾ ವಿಧಾನ, ಪಾಶ್ಚಿಮಾತ್ಯ ಸಂಸ್ಕೃತಿ ಇವುಗಳನ್ನು ಗಮನಿಸುತ್ತ ಒಗ್ಗಿಕೊಳ್ಳುತ್ತ ಇದ್ದಾಳೆ.
Continue reading “ಭಾರತೀಯರು ನಾವು ಭಾರತೀಯರು”