Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೫

ನಾವು ರುವಾಂಡಾದಲ್ಲಿ ಭೇಟಿಯಾದ ಬಹಳಷ್ಟು ಜನರ ಬಾಯಲ್ಲಿ ಅವರ ದೇಶದ President (ಅಧ್ಯಕ್ಷ), ಪೌಲ್ ಕಗಾಮೆಯವರ ಬಗ್ಗೆ ಮೆಚ್ಚುಗೆಯ ಮಾತು ಕೇಳುತ್ತಿತ್ತು. ಸ್ವಚ್ಛ, ಸುಂದರ, ಅಭಿವೃದ್ಧಿಯ ಕಡೆ ಸಾಗಿರುವ, ರುವಾಂಡಾದ ನವನಿರ್ಮಾಣದ ಇವರ ಬಹಳಷ್ಟು ಯೋಜನೆಗಳು ಒಂದೆೊಂದಾಗಿ ಕಾರ್ಯಗತಗೊಳ್ಳುತ್ತಿವೆ.

Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೫”
Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೪

ಇಂದು ನಾನು ಹೇಳಹೊರಟಿರುವುದು, ಆ ದೇಶದಲ್ಲಿ ನಡೆದ ಒಂದು ಬರ್ಬರ ಕೃತ್ಯದ ಬಗ್ಗೆ..ಜನಾಂಗೀಯ ನರಮೇಧದ (Genocide) ಬಗ್ಗೆ..

ಈ ವಿಷಯವನ್ನು ಹೇಗೆ ಬರೆಯಲಿ?

ಕೈ ಕಂಪಿಸಿದೆ…ಮನಸು ತಲ್ಲಣಿಸಿದೆ…ಆದರೂ ಪ್ರಯತ್ನಿಸಿದ್ದೇನೆ😢😭

Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೪”
Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೩

ಜಾನುವಾರುಗಳು ರುವಾಂಡದ ಸಂಸ್ಕೃತಿಯ ಒಂದು ಅವಿಭಾಜ್ಯ ಹಾಗೂ ಮುಖ್ಯ ಅಂಗ. ಕಿನ್ಯಾರುವಾಂಡಾ ಭಾಷೆಯಲ್ಲಿ, ,ಗಿರ ಇಂಕಾ, ಎಂದರೆ ‘ನಿಮಗೆ ಒಂದು ದನ ಸಿಗಲಿ’ ಎಂದು, ಅದೇ ರೀತಿ, ‘ ಅಮಾಶ್ಯೋ’ ಎಂದರೆ, ನಿಮಗೆ ‘ಸಾವಿರ ದನಗಳು ದೊರೆಯಲಿ’, ಎಂದೂ ಅರ್ಥ. ಇದು ಒಬ್ಬರು ಇನ್ನೊಬ್ಬರಿಗೆ, ಶುಭಾಶಯ, ಧನ್ಯವಾದ ವ್ಯಕ್ತ ಪಡಿಸುವ ರೀತಿ !😊❤️ರುವಾಂಡಾದಲ್ಲಿ ಹೊಸ ಮದುಮಕ್ಕಳಿಗೆ ಕರುವನ್ನು ಉಡುಗೊರೆಯಾಗಿ ನೀಡುವ, ಮದುವೆಯಲ್ಲಿ ದನಗಳನ್ನು ವಧು ದಕ್ಷಿಣೆಯಾಗಿ ಕೊಡುವ ಪರಿಪಾಠವಿದೆ. ಮಕ್ಕಳಿಗೆ ದನಗಳಿಗೆ ಸಂಬಂಧಿಸಿದ ಹೆಸರುಗಳನ್ನೂ ಇಡುತ್ತಾರೆ. ಉದಾ: ‘ಕನ್ಯಾನ’ ಎಂಬ ಹೆಸರಿನ ಅರ್ಥ ಹೆಣ್ಣುಕರು ಎಂದು.. ನನಗೆ ಆಗ ನೆನಪಾದದ್ದು, ನಮ್ಮಲ್ಲಿ ಪ್ರಚಲಿತವಿರುವ, ನಂದಿನಿ, ಸುರಭಿ ಮುಂತಾದ ಹೆಸರುಗಳು ಮತ್ತು ನಮ್ಮ ಇತರ ಪದ್ಧತಿಗಳು.. ಗೃಹಪ್ರವೇಶ ಸಂದರ್ಭದಲ್ಲಿ, ದನವನ್ನು ಮನೆಹೊಕ್ಕಿಸುವುದು ಇತ್ಯಾದಿ…

Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೩”
Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೨

ಕಳೆದ ನವೆಂಬರ್ ೧೦ರಂದು ಮುಂಬೈ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂಟು ಗಂಟೆ ಪ್ರಯಾಣಿಸಿ, ಬೆಳಗ್ಗೆ ರುವಾಂಡಾದ ರಾಜಧಾನಿ, ಕಿಗಾಲಿಯ ವಿಮಾನ ನಿಲ್ದಾಣ ತಲುಪಿದಾಗ,

Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೨”
Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೧

ಚಿತ್ತಕಲುಕುವ ಘೋರ ಜನಾಂಗೀಯ ಯುದ್ಧದ ಪರಿಣಾಮ, 1994ರಲ್ಲಿ, ಅಂದರೆ ಸರಿಸುಮಾರು ಇಪ್ಪತ್ತೇಳು ವರುಷಗಳ ಹಿಂದೆ ರುವಾಂಡಾ ದೇಶದ ಜನಮಾನಸ ವ್ಯಾಕುಲತೆಯ ಪರಾಕಾಷ್ಠೆಯಲ್ಲಿ ಮುಳುಗಿತ್ತು. ಅತಿದ್ವೇಷ ಹಾಗೂ ಹಗೆತನದ ಘೋರ ಪರಿಣಾಮಗಳನ್ನು ಮನಗಂಡ ಆ ದೇಶ ಇಂದು, ಶಾಂತಿಯುತ ಸಹಬಾಳ್ವೆ, ಶಿಸ್ತು ಹಾಗೂ ಪರಿಶ್ರಮಗಳತ್ತ ಮನಹರಿಸಿ, ಮಧ್ಯಪೂರ್ವ ಆಫ್ರಿಕಾದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಲಿದೆ.

Continue reading “ರುವಾಂಡಾ ದೇಶ ಪರ್ಯಟನೆಯ ಮೆಲುಕು-೧”
Posted in ಸಣ್ಣ ಕತೆ

ಆ ರಿಕ್ಷಾ ಡ್ರೈವರ್..

ರಜಾ ಸಮಯ. ಮಕ್ಕಳಿಗೆ ಹತ್ತಿರದ ನಗರ ತೋರಿಸಲೆಂದು ಅಪ್ಪ-ಅಮ್ಮ ನಿಶ್ಚಯಿಸಿದ್ದಾರೆ. ಆ ಊರಿನ ಬಗೆಗಿನ ಜ್ಞಾನ ವಿಕಸನಕ್ಕೂ ಆಯಿತು, ಮಕ್ಕಳೊಂದಿಗೆ ಬಾಂಧವ್ಯ ವೃದ್ಧಿಗೂ ಪೂರಕ ಎಂದುಕೊಂಡು ತಿರುಗಾಡಿಕೊಂಡು ಬರೋಣವೆಂದು ಬೆಳಿಗ್ಗೆ ಬೇಗನೆ ಹೊರಟಿದ್ದಾರೆ. ದಿನವಿಡೀ ಪಟ್ಟಿ ಮಾಡಿಟ್ಟಿರುವ ಬೇರೆ ಬೇರೆ ಸ್ಥಳಗಳ ಭೇಟಿ. ಊಟ ತಿಂಡಿ ಹೊರಗಡೆಯೇ ಮಾಡುವುದು ಅಂತ ಪ್ಲಾನ್.

Continue reading “ಆ ರಿಕ್ಷಾ ಡ್ರೈವರ್..”
Posted in ಸಣ್ಣ ಕತೆ

ಸೌಗಂಧಿಕಾ ‌ಸೊಲ್ಯೂಶನ್ಸ್!

ಆಗ ಆತ ಹತ್ತು ವರುಷದ ಎಳೆಯ ಹುಡುಗ. ಮನೆಗೆ ಅಮ್ಮನ ಗೆಳತಿಯರು ಅಥವಾ ಸಂಬಂಧ ದ ಅವರ ಸಮಪ್ರಾಯದ ಹೆಂಗಸರು ಬಂದರೆಂದರೆ ಆತನಿಗೆ ಬಹಳ ಖುಷಿ. ಅಂತಹ ದಿನಗಳಿಗಾಗಿ ಆತ ಎದುರು ನೋಡುತ್ತಿರುತ್ತಾನೆ. ಅಮ್ಮನ ಗೆಳತಿಯರು ಬಂದರೆ ಒಟ್ಟಿಗೆ ತನ್ನ ಓರಗೆಯ ಅವರ ಮಕ್ಕಳೂ ಬರುತ್ತಾರೆ. ಅಮ್ಮ ಮತ್ತು ಅವರ ಗೆಳತಿಯರು ಮಾತಿನಲ್ಲಿ ಮುಳುಗಿದರೆ ಮಕ್ಕಳು ಎಷ್ಟು ಹೊತ್ತು ಆಡಿಕೊಂಡಿದ್ದರೂ ಅವರ ಗೋಚರಕ್ಕೆ ಬರುವುದಿಲ್ಲ. ಮತ್ತೆ ಅಮ್ಮಂದಿರು ತರುವ ಅಥವಾ ಸೇರಿ ತಯಾರಿ‌ಸುವ ತಿಂಡಿಗಳಾದ ಪೋಡಿ, ಪೂರಿ, ತುಕುಡಿ ಇಂತಹವೆಲ್ಲಾ ಆ ದಿನದ ಬೋನಸ್!

Continue reading “ಸೌಗಂಧಿಕಾ ‌ಸೊಲ್ಯೂಶನ್ಸ್!”
Posted in ಸಣ್ಣ ಕತೆ

ಕರು ಮರಳಿ ಬಾರದಿದ್ದಾಗ!

ಸಾಯಂಕಾಲದ ಹೊತ್ತು. ಅಮ್ಮ ಮನೆಯ ಕೆಲಸಗಳನ್ನು ಮುಗಿಸಿ ಬೆಳಗ್ಗೆ ಗುಡ್ಡೆಗೆ ಮೇಯಲು ಬಿಟ್ಟಿರುವ ದನ-ಕರುಗಳು ಹಿಂದೆ ಬರುವುದನ್ನೇ ಕಾಯುವ ಸಮಯ. ಇಳಿಹಗಲಿನ ಆ ಸಮಯದಲ್ಲಿ ದನ-ಕರುಗಳ ಗೊರಸಿನ ತಾಡನದಿಂದ ಮೇಲೇಳುವ ಧೂಳಿನ ಕಣಗಳು ಹಗಲೆಲ್ಲಾ ದುಡಿದು ವಿರಮಿಸಲು ಹೊರಟಿರುವ ಇಳಿಸೂರ್ಯನ ಮೃದು ರಶ್ಮಿ ಯಲ್ಲಿ ಮಿರುಗುತ್ತ ಸುಂದರ ದೃಶ್ಯ ನಿರ್ಮಿಸುತ್ತವೆ. ಅದು ಗೋಧೂಳೀ ಸಮಯ ಎಂದು ವಿಶೇಷವಾಗಿ ವರ್ಣಿತ.

Continue reading “ಕರು ಮರಳಿ ಬಾರದಿದ್ದಾಗ!”
Posted in ಸಣ್ಣ ಕತೆ

ಚಂದಿರನ ಬೆಳಕಲ್ಲಿ…

ಆ ಹಳ್ಳಿಯಲ್ಲಿ, ಕಾಡ ಅಂಚಿನಲ್ಲಿರುವ ಆ ಮೂರು ಮನೆಯವರು ನೀರಿಗೆ ತಮ್ಮ ತೋಟದ ಬದಿಯಿಂದ ಹಾದು ಹೋಗುವ ಸುವರ್ಣಾ ನದಿಯನ್ನು ಅವಲಂಬಿಸಿದ್ದಾರೆ. ಸುವರ್ಣಾ ನದಿಯು ಆ ಮನೆಗಳಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಜಲಪಾತವಾಗಿ ಇಳಿದು ನಂತರ ರಭಸದಿಂದ ಇಳಿಹಾದಿಯಲ್ಲಿ ಮುಂದುವರೆಯುತ್ತಾಳೆ . ಆ ನದಿಗೆನಾಲೆಯನ್ನು ಕಟ್ಟಿ ಆ ಮೂರು ಮನೆಗಳವರು ನೀರನ್ನು ಉಪಯೋಗಿಸುತ್ತಾರೆ.

Continue reading “ಚಂದಿರನ ಬೆಳಕಲ್ಲಿ…”