ಮನೆಯಲ್ಲಿ ಪಚ್ಚುವಿನ ಉಪನಯನದ ತಯಾರಿ. ಹಾಲ್ ಬುಕಿಂಗ್, ಆಮಂತ್ರಣ ಪತ್ರಿಕೆಯ ವಿನ್ಯಾಸ ಹಾಗೂ ಮುದ್ರಣ, ಆ ನಂತರ ಸಂಬಂಧಿಕರ, ಮಿತ್ರರ ಮನೆಗೆ ಆಹ್ವಾನ, ಕೇಟರಿಂಗ್ ನವರೊಂದಿಗೆ ಭಕ್ಷ ಭೋಜ್ಯಗಳ ಬಗ್ಗೆ ನಿರ್ಣಯ, ವಟುವಿನ ಉಡುಪು-ಅಲಂಕಾರ, ಮನೆಯವರಿಗೆ, ಬಂಧುಗಳಿಗೆ ಬಟ್ಟೆಬರೆ ಎಲ್ಲ ತಯಾರಿಯೂ ಜೋರಾಗಿ ನಡೆದಿತ್ತು.
Continue reading “ಮಗು ಮಾತು;ನಗೆ ತಂತು!-೧”Author: sumana
ನ(ನಿ)ಮ್ಮ ಮನೆ

ಹೊಸದಾಗಿ ಮದುವೆಯಾದ ತಾರಿಣಿಗೆ ಗಂಡನ ಮನೆಯಲ್ಲಿ ಅತ್ತೆಮಾವಂದಿರೊಂದಿಗಿದ್ದು ತನ್ನ ಆಫೀಸು ಕೆಲಸದ ನಿರ್ವಹಣೆ ಮಾತ್ರವಲ್ಲ, ಆ ಮನೆಯ ರೀತಿರಿವಾಜುಗಳನ್ನೂ ಕಲಿಯುವ ಸಂದರ್ಭ. ಚುರುಕಿನ ಹುಡುಗಿ ತಾರಿಣಿ ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಮೆಚ್ಚಿನ ಸೊಸೆಯಾಗಿದ್ದಾಳೆ. ಅತ್ತೆ ಮಾವ ಅವಳನ್ನು ಮಗಳೆಂದೇ ಭಾವಿಸಿದ್ದಾರೆ. ಅವಳ ಗಂಡನಿಗೂ ತನ್ನ ಹೆಂಡತಿ ಎಲ್ಲರ ಪ್ರೀತಿ ಪಾತ್ರಳು ಎಂಬ ಹೆಮ್ಮೆ. ‘ನೀನು ಈಗಷ್ಟೆ ಬಂದಿದ್ದೀಯ. ಇಷ್ಟು ಬೇಗ ಎಲ್ಲರನ್ನು ಬುಟ್ಟಿಗೆ ಹಾಕ್ಕೊಂಡಿದ್ದೀಯ’ ಅಂತ ಹೆಂಡತಿಯನ್ನು ಛೇಡಿಸುತ್ತಿರುತ್ತಾನೆ.
Continue reading “ನ(ನಿ)ಮ್ಮ ಮನೆ”ಶ್ರೀ ತುಳಸಿ

ಮನೆಮುಂದೆ ಕಟ್ಟೆಯಲಿ ದಿವ್ಯ ಶ್ರೀತುಳಸಿ
ಮನೆಯೊಡತಿ ನೀರೆರೆದು ದಿನವು ಪೋಷಿಸಿ
ಮನದುಂಬಿ ಅರಸಿನ ಕುಂಕುಮದಿ ಅರ್ಚಿಸಿ
ಅನುದಿನ ಪ್ರದಕ್ಷಿಣೆಗೈಯುತ ಹೂಗಳರ್ಪಿಸಿ
Continue reading “ಶ್ರೀ ತುಳಸಿ”ಆಲದ ಮರ
ನದೀಪಾತ್ರ

‘ಮನೆಯಲ್ಲೇ ಓದಿಕೊಳ್ಳಿ ಮಕ್ಕಳೇ, ನದಿಯಲ್ಲಿ ಹುಳು ಹುಪ್ಪಟೆ ಕಚ್ಚಬಹುದು, ನೀವು ಸಣ್ಣವರು, ನಿಮ್ಮಷ್ಟಕ್ಕೆೇ ಹೋಗಬೇಡಿ’ ಎನ್ನುತ್ತಿರುವುದನ್ನು ಲೆಕ್ಕಿಸದೆ, ‘ಅಮ್ಮಾ.. ಅಲ್ಲಿ ಕಲ್ಲು ಬಂಡೆಗಳ ಮೇಲೆ ಕುಳಿತು ಓದಿಕೊಳ್ಳುತ್ತೇವೆ ಬಿಡಮ್ಮಾ’
Continue reading “ನದೀಪಾತ್ರ”Dedication

Flower of the hibiscus
Gathering of the day
I dedicate to the feet of Dasharathi
ನೆಕ್ಕರೆ ಗಿಡದ ತೋಪು!

ರಾತ್ರೆ ಪೂರ್ತಿ ಸುರಿದ ಮಳೆಯ ನೀರ ಹನಿಗಳು ಮರ ಗಿಡ ಹುಲ್ಲುಗಳ ಮೇಲೆ ಪವಡಿಸಿರುವಂತೆ, ಬಾನ ಮೇಲೇರುತ್ತಿರುವ ಸೂರ್ಯನ ಕಿರಣಗಳು ಆ ನೀರ ಗೋಲಗಳನ್ನು ಛೇದಿಸ ಹೊರಟಿದ್ದವು. ಆ ಗೋಲ ಹನಿಗಳೋ ತಮ್ಮೆಡೆಗೆ ತೂರಿ ಬಂದ ಬೆಳಕನ್ನು ಪ್ರತಿಫಲಿಸಿ, ಸ್ಫಟಿಕಗಳೇನೋ ಎಂಬಂತೆ ಹೊಳೆಯುತ್ತಿದ್ದವು. ಮುಂಜಾವಿನ ಈ ಸೌಂದರ್ಯವನ್ನು ಆಸ್ವಾದಿಸಿ ನಾವೆಲ್ಲ ಸಾಗುತ್ತಿರುವಾಗ ಒಬ್ಬರು ಸಂತೋಷದಿಂದ ‘ನೆಕ್ಕರೆ ಗಿಡ.. ನೆಕ್ಕರೆ ಗಿಡ.. ಎಂದಾಗ ಕಂಡದ್ದು ಕಾಡ ಬದಿಯಲ್ಲಿ ಎಲ್ಲೆಡೆ ಸೊಂಪಾಗಿ ಹಬ್ಬಿಕೊಂಡಿರುವ ನೆಕ್ಕರೆ ಗಿಡದ ಪೊದೆಗಳು ಹಾಗೂ ಅವುಗಳ ಮೈತುಂಬ ಹೂಗುಚ್ಛಗಳು