Posted in ಚಿತ್ಪಾವನೀ

ಕಾಕ್ಕಾಚೆ ಗೋಷ್ಟ್ಯಾಂಚಿ ಗೋಷ್ಟಿ

ಇಟುಕಿ ಮಿಟುಕಿ ಗೋಷ್ಠಿ
ಮಾಲಾ ಕೇಳ* ತೂಲಾ ತ್ಸಾಲಿ
ಅಸ* ಮ್ಹಣ್ಸಲೋ ಕಾಕ್ಕಾ
ಪ್ರತಿನಿತ್ಯ ಗೋಷ್ಟಿಂಚೆ ಕಡೇಕಾವರಿ

Continue reading “ಕಾಕ್ಕಾಚೆ ಗೋಷ್ಟ್ಯಾಂಚಿ ಗೋಷ್ಟಿ”
Posted in ಸಣ್ಣ ಕತೆ

ಶ್ಶಾಮಲಿಯ ರಂಗೋಲಿ

ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ತಯಾರಿ. ಇದರ ಅಂಗವಾಗಿ ವಿವಿಧ ಸ್ಪರ್ಧೆಗಳು. ಒಂದನೇ ತರಗತಿಯ ಮಕ್ಕಳ ಉತ್ಸಾಹ ಹೇಳತೀರದು. ಆ ದಿನ ರಂಗೋಲಿ ಬಿಡಿಸುವ ಸ್ಪರ್ಧೆ..

Continue reading “ಶ್ಶಾಮಲಿಯ ರಂಗೋಲಿ”
Posted in ಸಣ್ಣ ಕತೆ

ಅಜ್ಞಾತ‌ ಸ್ನೇಹಿ

Photo Credit: Jeffrey Hamilton, Unsplash

ಕ್ಲಾಸಿನಲ್ಲಿ ಎದ್ದು ನಿಲ್ಲಿಸಿ ಪ್ರಶ್ನೆ ಕೇಳಿ ಗಲಿಬಿಲಿ ಗೊಳಿಸುವ, ಏರಿಳಿತವಿಲ್ಲದ ಸ್ವರದಿಂದ ಪಾಠ ಮಾಡಿ ಬೋರ್ ಹೊಡೆಸುವ ಆ ಮೇಡಂ ಬಗ್ಗೆ ಮನೀಷಾಗೆ ಅಸಮಾಧಾನ. ಇಂದು ತರಗತಿಯಲ್ಲಿ ಪಾಠದ ಕಡೆಗೆ ಗಮನ ಕೊಡದ್ದಕ್ಕೆ ಮೇಡಂ ಕೈಯಲ್ಲಿ ಉಗಿಸಿಕೊಂಡಳು ಕೂಡ. ‘ಪಾಠ ಇಂಟರೆಸ್ಟಿಂಗ್ ಆಗಿದ್ದರೆ ತಾನೆ ಕೇಳೋಣ ಅನಿಸುವುದು’…. ಉದ್ವೇಗದಿಂದ ಮನೀಷಾ ನಂತರದ ಕ್ಲಾಸ್ ಬಂಕ್ ಮಾಡಿ ಕಂಪ್ಯೂಟರ್ ಲ್ಯಾಬ್ ನಲ್ಲಿ ಯಾರೂ ಇಲ್ಲದ್ದು ಗಮನಿಸಿ ಅಲ್ಲೇ ಹಿಂದಿನ ಒಂದು ಟೇಬಲ್ ಗೆ ಧಿಮಿಗುಡುತ್ತಿರುವ ತಲೆಯಾನಿಸಿ ಕುಳಿತು ತನಗರಿವಿಲ್ಲದಂತೆ ಟೇಬಲ್ ಮೇಲೆ ಪೆನ್ಸಿಲ್ನಿಂದ ,’ ಇಂಗ್ಲಿಷ್ ಮೇಡಂ ನನಗಿಷ್ಟವಿಲ್ಲ’ ಎಂದು ಗೀಚಿದಳು. ಸ್ವಲ್ಪ ಹೊತ್ತು ಅಲ್ಲೇ ಕಣ್ಣು ಮುಚ್ಚಿ ಕುಳಿತು ನಂತರ ಮುಖ ತೊಳೆದು ನೀರು ಕುಡಿದು ಬಂದಾಗ ಕದಡಿದ ಮನಸ್ಸು ತಹಬದಿಗೆ ಬಂದಿತ್ತು.

Continue reading “ಅಜ್ಞಾತ‌ ಸ್ನೇಹಿ”