‘ಕೊದನೆ’ ಎಂದು ಬಹಳಷ್ಟು ಕಡೆ ಕರೆಯಲ್ಪಡುವ, ಈ ‘ಕಾಡು ಬದನೆ’ ಗಿಡ ನಮ್ಮ ಪರಿಸರದಲ್ಲಿ ಅಲ್ಲಲ್ಲಿ ಕಂಡು ಬರುವುದು. ಹಿತೋಷ್ಣ ವಾತಾವರಣದಲ್ಲಿ ಈ ಗಿಡ ಎತ್ತರಕ್ಕೆ ಬೆಳೆದು, ಗೊಂಚಲು ಗೊಂಚಲಲ್ಲಿ, ಸಣ್ಣ ಸಣ್ಣ ಹೂವು ಕಾಯಿಗಳನ್ನು ನೀಡುವುದು. ಆಕಾರ, ಬಣ್ಣಗಳಲ್ಲಿ ಬದನೆಗಳನ್ನು ಹೋಲುವ ಈ ಸಣ್ಣ ಕಾಯಿಗಳಿಂದ ಚಟ್ನಿ ಮುಂತಾದುವುಗಳನ್ನು ಮಾಡಬಹುದು. ಅನೇಕ ವಿಟಮಿನ್ ಗಳ ಆಗರವಾಗಿರುವ ಈ ಕಾಡು ತರಕಾರಿಯನ್ನು ನಾವು ಹೆಚ್ಚೇನೂ ಉಪಯೋಗಿಸುತ್ತಿಲ್ಲ.
ನನ್ನ ತಮ್ಮ, ಸಣ್ಣವನಿದ್ದಾಗ ಕೆೊದನೆ ಗಿಡಕ್ಕೆ ಬದನೆ ಗಿಡದ ಗೆಲ್ಲನ್ನು, ಜೀರಿಗೆ ಮೆಣಸಿನ ಗಿಡಕ್ಕೆ ಹಸಿ ಮೆಣಸಿನ ಗೆಲ್ಲನ್ನು ಕಶಿ ಕಟ್ಟುವ (grafting) ಪ್ರಯೋಗ ಮಾಡುತ್ತಿದ್ದ. ಕಶಿ ಕಟ್ಟಿದ್ದು ಸರಿಯಾದಾಗ ನಾವು ಸಂತೋಷ ಪಡುತ್ತಿದ್ದೆವು. ಕಶಿ ಕಟ್ಟುವುದರಿಂದ, ಬದನೆಯ, ಹಸಿ ಮೆಣಸಿನ ಇಳುವರಿ ಕೊದನೆ ಹಾಗೂ ಜೀರಿಗೆ ಮೆಣಸಿನ ಇಳುವರಿಯಂತೆ ಜಾಸ್ತಿಯಾಗುವುದು ಅಂತ ನಮ್ಮ ನಿರೀಕ್ಷೆಯಾಗಿರುತ್ತಿತ್ತು!
ತಂತಾನೆ ನಮ್ಮ ಕೈತೋಟದಲ್ಲಿ ಹುಟ್ಟಿದ ಈ ಗಿಡ, ಬದನೆಯಲ್ಲ, ಕೊದನೆ ಅಂತ ಗೊತ್ತಾದಾಗ, ಏನೋ ಒಂದು ಕನೆಕ್ಟೆಡ್ ಫೀಲ್
ಸುಮನಾ