ಮನೆಮುಂದೆ ಕಟ್ಟೆಯಲಿ ದಿವ್ಯ ಶ್ರೀತುಳಸಿ
ಮನೆಯೊಡತಿ ನೀರೆರೆದು ದಿನವು ಪೋಷಿಸಿ
ಮನದುಂಬಿ ಅರಸಿನ ಕುಂಕುಮದಿ ಅರ್ಚಿಸಿ
ಅನುದಿನ ಪ್ರದಕ್ಷಿಣೆಗೈಯುತ ಹೂಗಳರ್ಪಿಸಿ
ಕೃಷ್ಣತುಳಸಿ ರಾಮತುಳಸಿ ಹಲವು ಪ್ರಭೇದ
ಗಿಡ-ಮರ ತುಳಸಿಯಲಿ ಕೇಸರದ ಗಂಧ
ಯಜ್ಞಯಾಗಾದಿ ಅರ್ಚನೆ ಆತ್ಮಸಂಬಂಧ
ತೀರ್ಥಪ್ರಸಾದ ಸನ್ನಿಧಿಯೆ ಪರಮಾನಂದ
ಖಗಮೃಗ ಮನುಜ ಇಲ್ಲವೀ ಭೇದ
ಕಣಕಣದಿ ಎಲ್ಲರಿಗು ಲಭ್ಯ ದಿವ್ಯೌಷಧ
ಕುದಿಸಿ ಮಾಡ್ವರು ಲೇಹ ಕಷಾಯ ಕಾಢ
ಜಗದಗಲದ ಕೀರ್ತಿ ತುಳಸಿ ಆಯುರ್ವೇದ
ಸಿನೆಮಾ ಸೀರಿಯಲ್ಗಳಲಿ ತುಳಸಿ ಪ್ರಭಾವ
ಗ್ರೀನ್ ಟೀ, ಶ್ಯಾಂಪೂಗಳಲೂ ಆವಿರ್ಭಾವ
ತುಳಸಿಮಣಿ ಜಪಕುಫ್ಯಾಶನ್ಗು ಎಂಬ ಭಾವ
ತಲೆಮಾರುಗಳದೀ ಸಂಬಂಧ ಅವಿನಾಭಾವ
ಸುಮನಾ