Posted in ಕವನ

ಮಳೆರಾಯಗೆ ಸ್ವಾಗತ

ಬಂದೆಯಲ್ಲ ಓ ಮಳೆರಾಯ

ಮರೆಯದಲೆ ಮಹಾರಾಯ

ವಿರಮಿಸದೆ ಬಲು ಕಾದಿದ್ದೆ

ಬೇಗೆಯಲಿ ಬೆವತಿದ್ದೆ

ಈಗಷ್ಟೇ ಬಂದಿರುವೆ

ಬೇಗನೆ ಹೋಗ್ವೆನು ಎಂದೆನಬೇಡ

ತಣಿಸು ನೀ ಈ ಪರಿ-ತಾಪ

ನೀಗುತಲಿ ಉರಿ ಕೋಪ

ಹೋದ್ವರುಷ ಅತಿವೃಷ್ಟಿ

ಮಾಡಿದೆ ಸಂಕಟ ಸೃಷ್ಟಿ

ಅತಿಯಾಗಿತ್ತು ನಿನ್ನ ಪ್ರತಾಪ

ಸೈರಿಸದಾಯ್ತು ಆ ವಿಕೋಪ

ಹುಲಿಪ್ರೀತಿಯ ರೀತಿ

ಆಗಿತ್ತು ನಿನ್ನಯ ರೀತಿ

ಮೃದುವಣಿಸು ಈ ಸಲ ಹೊಡೆತ

ತೋರಿಸುತ ಸಮಚಿತ್ತ

ಮಾಡುತ ಬಾ ಸ್ನೇಹ ಸಿಂಚನ

ಮುಸಲಧಾರೆಯ ಮೃದು ಮಜ್ಜನ

ಒರೆಸುತೆಲ್ಲರ ಕಷ್ಟದ ಕಣ್ಣೀರು

ಚಿಮುಕಿಸು ನೀ ಸಂತಸದ ಪನ್ನೀರು

-ಸುಮನಾ

Leave a Reply

Your email address will not be published. Required fields are marked *