Posted in ಕವನ ಮರಳಿ ಯತ್ನವ ಮಾಡು Posted on September 21, 2022 by sumana ಮುದ್ದು ಮರಿಯ ಸಾಹಸ ಇದ್ದರೂನು ಬಾಲಿಶ ಬಾಳಿಗೊಂದು ಸಂದೇಶ ನಾಳೆಗೊಂದು ಉದ್ದೇಶ ಸೋಲನೊಪ್ಪದ ಪ್ರಯತ್ನ ಬೇಲಿ ದಾಟುವ ಈ ಯತ್ನ ಗುರಿಯೆಡೆಗೆ ಮಾತ್ರ ಚಿತ್ತ ಅಡೆತಡೆಯ ನಿವಾರಿಸುತ್ತ ಗಾಯ ನೋವು ಆದರೇನು? ಧ್ಯೇಯದೆಡೆಗೆ ಸಾಗೆ ನೀನು ಬೇವು ಕಹಿಯಿದ್ದರೇನು ಜಯದ ಬೆಲ್ಲ ಮೆಲ್ಲು ನೀನು -ಸುಮನಾ Author: sumana View All Posts