ಹಳ್ಳಿಯೊಂದರ ಚಿಣ್ಣರಲ್ಲಿ
ಶಾಲೆಗ್ಹೋಗುವ ಸಂಭ್ರಮ
ಸಾಲುಸಾಲಲಿ ಸಾಗ್ವರಿವರು
‘ಮಾಳ ಗುರುಕುಲ’ ಶಾಲೆಯಿದುವು
ನಳಪಳಿಪ ಜ್ಞಾನ ದೇಗುಲ
ನಾಳೆಯ ಯುವಜನರ ಭವ್ಯಭವಿತಕೆ
ಆಳಬುನಾದಿ ದೊರಕುವ ಪುಣ್ಯನೆಲ
ಅಕ್ಕರೆಯ ಸ್ವಾಗತದ ಪರಿಪಾಠ
ಅಕ್ಷರದ ಜೊತೆ ಜೀವನದ ಪಾಠ
ಶಿಕ್ಷಕ ಶಿಕ್ಷಕಿಯರ ರಕ್ಷೆಯ ನೋಟ
ಸಾಕ್ಷಾತ್ ವಾಗ್ದೇವಿಯ ನೆಲೆತೋಟ
ಸುತ್ತಲೂ ಕಾಣುವ ಸೃಷ್ಟಿ ಸೌಂದರ್ಯ
ಪ್ರಕೃತಿಯ ಮಡಿಲಲ್ಲಿ ಶಿಕ್ಷಣ ಸೌಕರ್ಯ
ಹಿರಿಯರ ಮುನ್ನೋಟದಿ ಈ ಶಿಕ್ಷಣ ಸ್ವರ್ಗ
ಮರೆಯದೆ ಮುನ್ನಡೆಸುವಆಡಳಿತವರ್ಗ
ಶ್ರೇಷ್ಠ ಪ್ರಜೆಗಳ ನಿರ್ಮಾಣ ಸತ್ಕಾರ್ಯ
ನಿಷ್ಠೆಯಿಂದಲಿ ಇಲ್ಲಿ ನಡೆವ ಕೈಂಕರ್ಯ
ಶಿಷ್ಟ ಪರಂಪರೆಯ ಗುರು ಪ್ರಾಚಾರ್ಯ
ಸಾಷ್ಟಾಂಗ ಪ್ರಣಾಮ ತಮಗೆಲ್ಲರಿಗೆ ಆರ್ಯ
-ಸುಮನಾ