Posted in ಕವನ

ಇರುವೆ🦗🦗🦗

ತರುವೊಡಲ ಎಲೆಮನೆಯ ಜೋಡಿಸಿ
ದಾರಿ ತೋರುತಲಿ ನಿನ್ನ ಮಂದಿಗೆ
ಸರಿ, ಅದಾವ ಹೊಸ ಉಪಕ್ರಮಕೆ
ಇರುವೆ ನೀ ಕಾಯುತಾ ಇರುವೆ?!

ಗುರುತರವಾದುದೇನೋ ಇರಬೇಕು
ಸಾರುತಿದೆ ನಿಮ್ಮ ಚಲನವಲನವೆಲ್ಲ
ಬಿರುಬಿಸಿಲ ಝಳವ ಸ್ವಲ್ಪವೂ ಲೆಕ್ಕಿಸದೆ
ಇರುವೆ ಯಾಕೆ ಈ ರೀತಿ ಶತಪಥ ಸುತ್ತುತಿರುವೆ?!

ಗುರಿಯೆಡೆಗೇ ಇರೆ ನಿನ್ನಯ ದೃಷ್ಟಿ
ಬೇರೆಕಡೆ ಕಿಂಚಿತ್ತೂ ಗಮನವಿಲ್ಲ ನಿನಗೆ
ಮರೆಯಾಗಿ ಎಲ್ಲ ಚಿತ್ತಚಂಚಲತೆಯಿಂದು
ಇರುವೆ ..ನೀನೀಪರಿ ನನ್ನನಾವರಿಸಿರುವೆ!

Leave a Reply

Your email address will not be published. Required fields are marked *