Creeper from next door bush
Crosses compound in a hush
Crawling down to neighbour’s lush
Palatial twin homes are they
Tall walls built on boundary way Silence rules along the bay
Security guard of aloof neighbour
Sways his knife in great valour
To cut off this green intruder!
Unknowingly he throws away knife
Softened by the vine full of life
Turns to sky as a mystified self!
Smiles the lady from balcony across
Baffled, he calls out his lady boss
Pleasantries exchange with a bliss
Neighbours immerse in closeness
Creeper binds the detached homes
Its innocent move breaks the ice!
ಈ ಕವನದ ಭಾವಾನುವಾದ:
ಆಚೆ ಮನೆಯ ಬಳ್ಳಿ
ಆಚೆಮನೆಯ ಚೆಲು ಬಳ್ಳಿ ಯೊಂದು
ತಿಳಿಯದೆ ಆವರಣಗೋಡೆಯ ದಾಟಿಬಂದು
ಈಚೆಮನೆಯಂಗಳದಲಿ ಬೀಡು ಬಿಟ್ಟಿತ್ತು
ಅರಮನೆಯಂತಹ ಮಹಡಿ ಮನೆಗಳವು
ನಡುವೆ ಎತ್ತರಕೆ ಕಟ್ಟಿರುವ ಗೋಡೆ
ತಿಳಿಯದೆ ಇಕ್ಕೆಲಕೆ ಹಬ್ಬತೊಡಗಿದೆ ಬಳ್ಳಿ
ಮಹಡಿ ಮನೆಯಲಿ ಬರಿ ನಾಲ್ಕು ಜನ
ಮನೆಯಲಿ ಕವಿದಿಹಿದು ಬಹಳ ಮೌನ
ಒಡತಿಯರು ಮಹಡಿಯಲಿ ನಿಟ್ಟುಸಿರ ಜೊತೆಗೆ
ಈಚೆ ಮನೆಯ ಕಾವಲುಗಾರನು ತಾನು
ಗಡಿಗಳ ನಿರುಕಿಸುತ ಅಡ್ಡಾಡುತಿರುವಾಗ
ಕಂಡ ಸ್ವಚ್ಛಂದದಿ ಒಳಬಂದ ಈ ಬಳ್ಳಿಯ
ಯಾವ ಮಾಯಕದಲಿ ಇದು ಒಳಬಂತೆಂದು
ಕಡಿದು ಬಿಡುವೆನಿದನೆಂದು ರೋಷದಲಿ
ಕತ್ತಿಯನೆತ್ತೆ ಹಸಿರ ಹರ್ಷವನುಂಡು ಶಾಂತನಾದ
ಬಳ್ಳಿಮೀಟಿದ ಮೃದು ಭಾವದಲಿದ್ದ ಕಾವಲುಗಾರ
ತಲೆ ಎತ್ತಿ ನಗೆಮೊಗದಿ ಸುತ್ತಮುತ್ತಲು ನೋಡೆ
ಆಚೆ ಮನೆಯೊಡತಿ ಬಾಲ್ಕನಿಯಲಿದ್ದ ಹೊತ್ತು
ಆಕೆಯೂ ನಸುನಗಲು ಮಾತನಾಡಿದನಾತ
ಲಗುಬಗೆಯಲಿ ತನ್ನೊಡತಿಯ ಹೊರಗೆ ಕರೆತಂದ
ಮೊಗವೆತ್ತಿ ನಗುತ ಆಕೆ ಸೌಖ್ಯವೇ ಎಂದಳು
ವಿನಿಮಯವಾಯಿತು ಕುಶಲ ಸಮಾಚಾರ
ಮೌನವದು ಮರೆಯಾಗಿ ಮಾತು ಮೆರೆಯಿತು
ತಿಳಿಯಾಯಿತು ವಾತಾವರಣ ಆಗ ಇಳಿ ಸಂಜೆ
ಗೆಳೆತನದ ಸುಖದಲಿ ಹಿಗ್ಗಿತು ನೆರೆಹೊರೆಯು
ಸ್ನೇಹ ಪಲ್ಲವಿಗೆ ಈ ಬಳ್ಳಿ ಕಾರಣವಾಯ್ತು
ಮನೆ-ಮನಗಳನರಳಿಸುತ ಮುನ್ನಡೆಯಿತು