Posted in ಕವನ

ಸ್ನೇಹ ಸೌರಭ

ದುಂಡು ಮಲ್ಲಿಗೆಗಳೇ ಹೀಗೆ
ಫ್ರೆಂಡ್ಸ್ ಸಮೂಹದ ಹಾಗೆ
ಕಂಡೊಡನೆ ಸಂಭ್ರಮಿಸಿ
ಧಂಡಿ ಹೂನಗೆ ಬೀರುತ್ತವೆ…

ಮಲ್ಲಿಗೆಗಳ ನೋಟ; ಮಿತ್ರಕೂಟದ ಹಾಗೇ
ಹಲವು ಗುಂಪಲ್ಲಿ, ಮತ್ತೆ ಗಿಡದೆಡೆಯಲ್ಲಿ
ಚೆಲ್ಲುತ್ತ ಮುಗುಳುನಗೆ, ಅಲ್ಲಲ್ಲಿ ಅರಳುನಗೆ
ಚೆಲುವ ತೋರಣವನೆ ಕಟ್ಟಿ ‌ಸೆಳೆಯುತ್ತವೆ…

ದುಂಡುಮಲ್ಲಿಗೆಗಳ ಕಂಪಲ್ಲಿ
ದಿಂಡು ಸ್ನೇಹಕತೆಗಳ ಎಷ್ಟೊಂದು ನೆಂಪು
ಹಿಂಡು ಹಿಂಡಾಗಿ ಮಸ್ತಕದಿ ನೆರೆದು ಹೂ-
ದಂಡೆಯ ತೆರದಿ ಸೌರಭವ ಹರಡುತ್ತವೆ…

Leave a Reply

Your email address will not be published. Required fields are marked *