Posted in ಸಣ್ಣ ಕತೆ

ಸಣ್ಣ ಕತೆ

ಚೈತನ್ಯ

ಗಿರಿನಗರದ ಕಿಕ್ಕಿರಿದ ಮಾರ್ಕೆಟ್ ನ ಪಾರ್ಕಿಂಗ್ ಪ್ರದೇಶದಲ್ಲಿ, ತಮ್ಮ Audi ಕಾರನ್ನು ನಿಲ್ಲಿಸಿ ಅಲ್ಲಿನ ಕಾವಲುಗಾರನಿಗೆ ಪಾರ್ಕಿಂಗ್ ಫೀ ಕೊಟ್ಟು, ಕೈಚೀಲಗಳನ್ನು ಹೆಗಲಿಗೇರಿಸಿ, ಲಗುಬಗೆಯಿಂದ ವಾರದ ಖರೀದಿಗಾಗಿ ಧಾವಿಸಿದರು ಶ್ರೀಮಾ ಹಾಗೂ ಶ್ರೀಕೃಷ್ಣ ದಂಪತಿ.

ಶ್ರೀಮಾಳ ತಂದೆಯ ಆರೋಗ್ಯದಲ್ಲಿ ಏರುಪೇರಾದ ಕಾರಣ, ಅಮೇರಿಕಾದ Californiaದಲ್ಲಿರುವ, ತಮ್ಮ ಮುದ್ದಿನ ಒಬ್ಬ ನೇ ಮಗ ಚೈತನ್ಯನ ಮನೆಯಿಂದ, ಗಡಿಬಿಡಿಯಲ್ಲಿ, ಒಂದು ತಿಂಗಳ ಕೆಳಗೆ ಅವರಿಬ್ಬರು ಗಿರಿ ನಗರಕ್ಕೆ ಬಂದಿದ್ದರು. ಇದೀಗ ಶ್ರೀಮಾಳ ಅಕ್ಕರೆಯ ಆರೈಕೆಯಲ್ಲಿ, ವೈದ್ಯರ ಸಕಾಲಿಕ ಔಷಧೋಪಚಾರಗಳಿಂದ ತಂದೆಯ ಆರೋಗ್ಯ ಸುಧಾರಿಸಿದೆ.

ಚೈತನ್ಯ ಪ್ರತಿಭಾವಂತ ಹುಡುಗ. ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿ ಇದೀಗ Californiaದಲ್ಲಿ M.S. ಮಾಡುತ್ತಿದ್ದಾನೆ. ತಾವಿಬ್ಬರು ಹಿಂದಿರುಗಿದ ಮೇಲೆ ಅಲ್ಲಿ ಈಗ ಅವ ಒಬ್ಬನೇ ಇದ್ದಾನೆ….. ಕರುಳಬಳ್ಳಿಯ ನೆನಪು ಶ್ರೀಮಾಳನ್ನು ಆಗಾಗ ಕಾಡುತ್ತದೆ. ಮಗನೂ ಕೂಡ ಅಮ್ಮನನ್ನು ತುಂಬಾ miss ಮಾಡುತ್ತಾನೆ.

ಗಂಡನ ಕೈ ಹಿಡಿದು ಮಾರ್ಕೆಟ್ ಪ್ರದೇಶದಲ್ಲಿ ಸಾಗುತ್ತಿದ್ದಂತೆ, ತಾನು ಈಗ ಅಮೇರಿಕೆಗೆ ಮಗ ಚೈತನ್ಯನಲ್ಲಿಗೆ ಹಿಂದಿರುಗುವುದೇ, ಅಥವಾ ಭಾರತದಲ್ಲಿ ತಂದೆಯ ಬಳಿಯೇ ಇರುವುದೇ ಎಂಬ ಯೋಚನೆ ಶ್ರೀಮಾಳನ್ನು ಕಾಡುತ್ತದೆ. ತಂದೆಯವರೇನು ಬಾಯಿಬಿಟ್ಟು ನೀನು ಇಲ್ಲೇ ಇರು ಎಂದು ಹೇಳಿಲ್ಲ. ಆದರೆ ಅವರ ಮುಪ್ಪಿನ ಅನಾರೋಗ್ಯದ ಈ ಸಮಯದಲ್ಲಿ ಅವರೊಂದಿಗೆ ಇರುವುದು ತನ್ನ ಕರ್ತವ್ಯ ಎಂದು ಆಕೆ ಅಂದುಕೊಳ್ಳುತ್ತಾಳೆ. ಆದರೆ ಮಗ ಬಳಿಯಿಲ್ಲದೆ ಮನೆ, ಮನಸ್ಸು ಎಲ್ಲ ಖಾಲಿ ಖಾಲಿ ಎನಿಸುತ್ತದೆ. ಶ್ರೀಕೃಷ್ಣರಿಗೂ ಗೊತ್ತು ಅವಳನ್ನು ಆಗಾಗ ಕಾಡುವ ಈ ದ್ವಂದ್ವ….

ಮಾರ್ಕೆಟ್ ನಲ್ಲಿ ಸಾಗುತ್ತಿದ್ದಂತೆ ಅಂಗಡಿಯೊಂದರ ಮುಂದೆ ಗಕ್ಕನೆ ನಿಲ್ಲುತ್ತಾರೆ ಶ್ರೀಮಾ ಶ್ರೀಕೃಷ್ಣ ದಂಪತಿ. ಅಲ್ಲಿ ಕಾಣುತ್ತಿದೆ ಬಾಲಗಣಪನ ಬಲು ಸುಂದರವಾದ ಶ್ರೀಗಂಧದ ಒಂದು ಮೂರ್ತಿ. ತುಂಬು ಜೀವಂತಿಕೆ ಯಿಂದ ಕೂಡಿದ ಆ ಮೂರ್ತಿಯನ್ನು ತನ್ಮಯತೆ ಯಿಂದ ಶ್ರೀಕೃಷ್ಣ ನೋಡುತ್ತಾ ಇದ್ದಂತೆ, ಶ್ರೀ ಮಾ, ಆ ಬಾಲಗಣಪನನ್ನು ಎತ್ತಿ ಹಿಡಿದು ‘ ಕ್ರಿಶ್, ಅದೆಷ್ಟು ‘ ಚೈತನ್ಯ’ ನೋಡು ಇವನ ಮುಖದಲ್ಲಿ.. ಇವನನ್ನು ಮನೆಗೆ ಕೊಂಡೊಯ್ಯೋಣ ಅಲ್ಲವೇ’ ಎಂದು… ಅಷ್ಟರಲ್ಲೇ ತನ್ನ ಬಾಯಿಯಿಂದುದುರಿದ ಮಗನ ಹೆಸರನ್ನು ಬೆರಗಿನಿಂದ ಆನಂದಿಸುತ್ತಾಳೆ. ಇದೇ ಮನಸ್ಥಿತಿಯಲ್ಲಿ ಶ್ರೀಕೃಷ್ಣ ಅಂಗಡಿಯವರ ಬಳಿ ಕ್ರಯ ವಿಚಾರಿಸಿ, ದುಡ್ಡು ಕೊಡುತ್ತಿರುವಾಗ, ಶ್ರಿಮಾಳ ಮೊಬೈಲ್ ರಿಂಗುಣಿಸಿದೆ. ಆಚೆಯಿಂದ ಮಗ ಚೈತನ್ಯ ಉಲ್ಲಾಸದಿಂದ ‘ ಅಮ್ಮ, ಚೆನ್ನಾಗಿದ್ದೀಯಾ.. ಅಪ್ಪ -ಅಜ್ಜ ಹೇಗಿದ್ದಾರೆ.. ಅಜ್ಜ ನನ್ನು ಚೆನ್ನಾಗಿ ನೋಡಿಕೋ ಅಮ್ಮ…ನಾನಿಲ್ಲಿ responsible ಆಗಿ ಇರ್ತೀನಿ..ನೀವೇನೂ ಯೋಚನೆ ಮಾಡಬೇಡಿ ,,’ ಎನ್ನಲು….ಶ್ರೀಮಾ ಧಾರಾಕಾರವಾಗಿ ಹರಿಯುತ್ತಿದ್ದ ಕಣ್ಣೀರು ಒರೆಸಿಕೊಳ್ಳುತ್ತಾಳೆ ಮತ್ತು ಕೈಯ್ಯಲ್ಲಿದ್ದ ಬಾಲಗಣಪನನ್ನು ಗಟ್ಟಿ ಯಾಗಿ ತಬ್ಬಿಕೊಂಡು, ಶ್ರೀ ಗಂಧದ ನೆತ್ತಿಯನ್ನು ಮೂಸಿ, ‘ಚೈತನ್ಯ… ಸದ್ಯಕ್ಕೆ ನಾವು ಇಲ್ಲಿಯೇ ಇರ್ತೀವಿ.. ಫೋನಿನಲ್ಲಿ ಆಗಾಗ ಮಾತನಾಡ್ತಾ ಇದ್ದರೆ, ನೀನಿಲ್ಲೇ ಇದ್ದ ಹಾಗೆ ಅನಿಸುತ್ತದೆ..ದಿನಾ ಫೋನ್ ಮಾಡು ಮಗಾ..’ ಎಂದು ಗಂಡನನ್ನೇ ನೋಡುತ್ತಾ ನಿರಾಳವಾಗಿ ನಗುತ್ತಾ ಳೆ.

6 thoughts on “ಸಣ್ಣ ಕತೆ

  1. ತಾನು ತಂದೆಯೊಟ್ಟಿಗೆ ಇರಬೇಕೋ, ಮಗನೊಅಂದಿಗೋ ಎಅಂಬ ಸಂದಿಗ್ಧ, ಚೈತನ್ಯಭರಿತವಾದ ಗಣೇಶನ ವಿಗ್ರಹವನ್ನು ನೋಡುತ್ತಲೇ ಶ್ರೀಮಾಲ ಬಾಯಿಯಿಂದ ಹೊರಟ ಮಗನ ಹೆಸರು, ಅದರಂದ ಉಕ್ಕಿದ ಮಗನ ಮೇಲಿನ ಪ್ರೀತಿ, ಒಟ್ಟಿಗೇ ಮಗನ ಪ್ರತಿ ಪ್ರೀತಿಯ ಅಪೇಕ್ಷೆ, ಶ್ರೀಮಾ ಇಲ್ಲದೆಯೂ ತನ್ನನ್ನು ತಾನುಅಮೇರಿಕದಲ್ಲಿ ಸಂಭಾಲಿಸಿಕೊಲ್ಲಬಲ್ಲೆನಂಬ ಆಶ್ವಾಸನೆಯಾದರೂ ತಾನು ಮಗನಂದ ದೂರವಾದೆನೇ ಎಅಂಬ ಧ್ವನಿ, ಆ ಹೇಳಲಾಗದ ಖಾಲಿತನವನ್ನು ನಿರಾಲತೆಯ ಆನಂದದಲ್ಲಿ ಬದಲಿಸಿದ ಗಣೇಶ. ಕಥೆಯ ಓಟದ ಒಟ್ಟಿಗೇ ಸಾಗಿ ಬಂದ ಅಮ್ಮನ ಕಲರುಲಿನ ಧ್ವನಿ ಸುಅಂದರವಾಗಿ ಮೂಡಿಬಂದಿದೆ. ಓದುಗನನ್ನು ಶಬ್ದಗಳ ಮೂಲಕ ಹೇಲಲಾಗದ ಸುಅಂದರವಾದ ಅನುಭೂತಿಯ ಕಡೆಗೆ ಒಯ್ಯುತ್ತದೆ. ಶುಭಾಶಯಗಳು. ಟೈಪಿಸುವಾಗಿನ ಲಿಪಿಯ ಅವಾಅಂತರಕ್ಕೆ ಕ್ಷಮೆಯಿರಲಿ.

  2. Tumba chennagide,tayiya preetiya kare maganike kelitu haage magana mamate ,tayiya dwandada nirdharakke kshanadalle Uttara sikkantide.tayiya manassu nirala vayitalla! Sannakathe yalli yestondu ardha.preeti,tyaga,mamate, Uttara yellavu sikkantide.
    All the best sumana.

Leave a Reply

Your email address will not be published. Required fields are marked *