ಬೃಹದುಯ್ಯಾಲೆಯ ಜೀಕು; ನಮ್ಮ ಈ ಜೀವನ
ಮಹತ್ ಸೃಷ್ಟಿಯಿದೊಂದು ಆಟದ ಮೈದಾನ!
ಕಣ್ಣೆದುರ ಪ್ರಪಂಚ ;ಉಯ್ಯಾಲೆ ಮಂಚ
ತೂಗುಹಗ್ಗಗಳ ಕೊಕ್ಕೆ ಸಿಲುಕಿವೆ ಬಾನಿನ ಹೆಂಚ!
ಬಲವಾಗಿ ಜೀಕು; ತಲುಪು ಕ್ಷಿತಿಜದ ಅಂಚ
ಬಲ್ಲವನೆ ಬಲ್ಲ ಈ ರೋಮಾಂಚನದ ಮಿಂಚ!
ಇತ್ತಲಿಂದತ್ತ ಅತ್ತಲಿಂದಿತ್ತ ಓಲಾಡುವಾಟ
ದಿನದಿನವೂ ಏರಿಳಿತದ ಅಚ್ಚರಿಯ ಓಟ
ಸ್ಥಿಮಿತವ ಕಳೆದರೆ ದಿನವು ತೊಳಲಾಟ
ಸ್ಥಿತಪ್ರಜ್ಞತೆಯಲಿ ಸೌಖ್ಯ; ಆದರದು ಕಷ್ಟ.
ಅದೃಶ್ಯದಾಟವಿದು, ತಿಳಿದಿಲ್ಲ ಕಕ್ಷೆ
ಜೀಕುವ ಕೈಗಳ ಕಂಡಿಲ್ಲ; ನೋಡುವ ಆಶೆ
ಕಂಡರೆ ಕೇಳಬೇಕಿದೆ ಇದರ ನೀಲ ನಕಾಶೆ
ಇಂದಿಗಿರಲಿ ಮನಃಸಾಕ್ಷಿ , ಮೀರಲು ಹತಾಶೆ.
ಹೆಂಚ….
ಹೊಸ ಶಬ್ದ .
ಪ್ರತಿಯೊಂದು ಸಾಲಲ್ಲೂ
ಪ್ರಾಸದ ಅಲೆ
ಉಯ್ಯಾಲೆ