Posted in ಸಣ್ಣ ಕತೆ

ರುವಾಂಡಾ ದೇಶ ಪರ್ಯಟನೆಯ ಮೆಲುಕು-೬

ರುವಾಂಡಾ ದೇಶ ಪರ್ಯಟಣೆಯ ಸಂದರ್ಭ, ನನ್ನ ಮನ ಚಿತ್ರಿಸಿಕೊಂಡ ಚಿತ್ರಗಳನ್ನು ಕಳೆದ ಐದು ಸಂಚಿಕೆಗಳಲ್ಲಿ ವಾಕ್ಯಗಳಾಗಿಸಿ ತಮ್ಮ ಮುಂದಿರಿಸಿದ್ದೆ. ಎಲ್ಲವೂ ಹೇಳಿಯಾಯಿತು ಎಂದು ಎಣಿಸುತ್ತಿರುವಾಗ ಆಳದಲ್ಲಿ ಹುದುಗಿದ್ದ ಕೆಲವು ಚಿತ್ರಗಳು ಚಿತ್-ಪರದೆಯ ಮೇಲೆ ಗೋಚರವಾಗುತ್ತಿವೆ.

ಆ ದೇಶದಲ್ಲಿ ಸ್ತ್ರೀ-ಪುರುಷ ಸಮಾನತೆ ಎದ್ದು ಕಾಣುತ್ತದೆ. ಅಲ್ಲಿನ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧಿತ್ವ 60%ನಷ್ಟು ಇದೆ. ಅಲ್ಲಿನ ಮಹಿಳೆಯರು ರಂಗುರಂಗಿನ ಬಟ್ಟೆಗಳನ್ನು ತೊಟ್ಟು ತಮ್ಮ ಉಡುಗೆಯ ಬಟ್ಟೆಯನ್ನೇ ಉಪಯೋಗಿಸಿ ಬೆನ್ನಹಿಂದೆ ಮಕ್ಕಳನ್ನು backpackನಂತೆ ಕಟ್ಟಿಕೊಂಡು ಓಡಾಡುತ್ತಾರೆ. ಇದರಿಂದ ಮಕ್ಕಳ ಕೈಕಾಲಿಗೆ ನೋವಾಗುವುದು ಎಂದು ಅಂತರ್ರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ವಾದಿಸುತ್ತಾರೆ. ನಮಗೆ ಅದೆಲ್ಲ ಅಭ್ಯಾಸ. ಅಮ್ಮನ ಬೆನ್ನ ಹಿಂದೆ ಆ ರೀತಿ ಇರುವುದು ನಮ್ಮ ಬಾಲ್ಯದ ಸವಿನೆನಪುಗಳಲ್ಲಿ ಒಂದು, ಅದು ನಮಗೆ ಬೇಕು ಅನ್ನುತ್ತಾರೆ ಸ್ಥಳೀಯರು.!❤️

ರುವಾಂಡನ್ನರು ಬೇಯಿಸಿದ ಬಟಾಟೆ, ಗೆಣಸು, ಬಟಾಣಿಯ ಕಾಳು, ನೇಂದ್ರ ಬಾಳೆ ಇವುಗಳನ್ನು ಅನ್ನ ಅಥವಾ ಜೋಳದ ಹಿಟ್ಟಿನಿಂದ ತಯಾರಿಸಿದ ಮುದ್ದೆಯೊಂದಿಗೆ ದಿನ ನಿತ್ಯ ತಿನ್ನುತ್ತಾರೆ.

ಕೃಷಿಪ್ರಧಾನವಾದ ಈ ದೇಶದಲ್ಲಿ ease of doing businessನ್ನು ಅನುಷ್ಠಾನ ಮಾಡಿದ್ದಾರೆ. RBD ಅಂದರೆ Rwanda Business Development Board ಎಂಬ ಸರಕಾರದ ಒಂದು ಅಂಗ, ಬಹಳ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶೀ ಉದ್ದಿಮೆ ಹೂಡಿಕೆದಾರರಿಗೆ, ರತ್ನಗಂಬಳಿಯ ಸ್ವಾಗತ ನೀಡುತ್ತಾರೆ. Onlineನಲ್ಲಿ ಕಂಪೆನಿ ನೋಂದಣಿ ಬಹಳ ಶೀಘ್ರವಾಗಿ ಮಾಡುತ್ತಾರೆ. ಈ ದೇಶದ ಅನುಕೂಲ ಹವಾಮಾನದಿಂದಾಗಿ, ಅದು ಮುಂದೊಂದು ದಿನ ಜಗತ್ತಿನ IT Hub ಆಗುವ ಲಕ್ಷಣಗಳು ತೋರುತ್ತಿವೆ.

ಅಲ್ಲಿ ಬಡತನವಿದೆ;ಅದನ್ನು ಮೆಟ್ಟಿ ಬದುಕು ಕಟ್ಟಿಕೊಳ್ಳಬೇಕೆಂಬ ಛಲವಿದೆ. ಅಲ್ಲಿ ನರಮೇಧದ ವಿಷಾದವಿದೆ;ಅದನ್ನು ಮರೆತು ಸೌಹಾರ್ದಯುತ ಬಾಳು ಬದುಕಬೇಕೆಂಬ ಮನಸ್ಸಿದೆ. ಅವರಿಗೆ ಶುಭಹಾರೈಕೆಯ ದನಿಯೊಂದು ಇದನ್ನವಲೋಕಿಸಿದ ಮನದಲ್ಲಿ ಮೂಡುತ್ತದೆ❤️🙏🌷

-ಸುಮನಾ🙏😊

Leave a Reply

Your email address will not be published. Required fields are marked *