Posted in ಸಣ್ಣ ಕತೆ

ನೆಕ್ಕರೆ ಗಿಡದ ತೋಪು!

ರಾತ್ರೆ ಪೂರ್ತಿ ಸುರಿದ ಮಳೆಯ ನೀರ ಹನಿಗಳು ಮರ ಗಿಡ ಹುಲ್ಲುಗಳ ಮೇಲೆ ಪವಡಿಸಿರುವಂತೆ, ಬಾನ ಮೇಲೇರುತ್ತಿರುವ ಸೂರ್ಯನ ಕಿರಣಗಳು ಆ ನೀರ ಗೋಲಗಳನ್ನು ಛೇದಿಸ ಹೊರಟಿದ್ದವು. ಆ ಗೋಲ ಹನಿಗಳೋ ತಮ್ಮೆಡೆಗೆ ತೂರಿ ಬಂದ ಬೆಳಕನ್ನು ಪ್ರತಿಫಲಿಸಿ, ಸ್ಫಟಿಕಗಳೇನೋ ಎಂಬಂತೆ ಹೊಳೆಯುತ್ತಿದ್ದವು. ಮುಂಜಾವಿನ ಈ ಸೌಂದರ್ಯವನ್ನು ಆಸ್ವಾದಿಸಿ ನಾವೆಲ್ಲ ಸಾಗುತ್ತಿರುವಾಗ ಒಬ್ಬರು ಸಂತೋಷದಿಂದ ‘ನೆಕ್ಕರೆ ಗಿಡ.. ನೆಕ್ಕರೆ ಗಿಡ.. ಎಂದಾಗ ಕಂಡದ್ದು ಕಾಡ ಬದಿಯಲ್ಲಿ ಎಲ್ಲೆಡೆ ಸೊಂಪಾಗಿ ಹಬ್ಬಿಕೊಂಡಿರುವ ನೆಕ್ಕರೆ ಗಿಡದ ಪೊದೆಗಳು ಹಾಗೂ ಅವುಗಳ ಮೈತುಂಬ ಹೂಗುಚ್ಛಗಳು😊❤️

ಈಗ ಈ ಕಾಡುಗಿಡಗಳು ಹೂ ಬಿಡುವ ಸಮಯವೆಂದು ತೋರುತ್ತದೆ. ಕಾಡಿನ ಬದಿಯಲ್ಲಿ ಸ್ವಾಭಾವಿಕವಾಗಿ ಬೆಳೆದು ಕಂಗೊಳಿಸುತ್ತಿರುವ ಗಿಡಗಳು ಎಲ್ಲರ ಮನಸೂರೆಗೊಂಡಿದ್ದವು.

ಐದು ಎಸಳುಗಳ ಈ ಸುಂದರ ಹೂವುಗಳು ಎರಡು-ಮೂರು ದಿನ ಗಿಡದಲ್ಲಿ ತಾಜಾ ಆಗಿರುತ್ತವೆ. ಈ ಗಿಡಗಳ ಚಿಗುರುಗಳಿಂದ ಬೇಸಿಗೆಗೆ ತಂಪೆನಿಸುವ ತಂಬುಳಿ ಹಾಗೂ ಚಟ್ನಿ ಸಹ ಮಾಡಬಹುದು.

ನೆಕ್ಕರೆ ಹಣ್ಣು ತಿಂದು ನಾಲಿಗೆ ನೀಲಿಯಾದದ್ದು ನೋಡಿ ಬಾಲ್ಯದಲ್ಲಿ ಸಂತೋಷ ಹಾಗೂ ಆಶ್ಚರ್ಯ ಪಡುತ್ತಿದ್ದೆವು. ಅಂದಿನ ಆ ದಿನಗಳ ನೆನಪೇ ನಮ್ಮನ್ನು ಇಂದು ಈ ಗಿಡಗಳ ಬಳಿ ಅಷ್ಟೊಂದು ಸೆಳೆಯಿತೋ ಏನೋ😊🌹

-ಸುಮನಾ ಘಾಟೆ🙏😊🌹

Leave a Reply

Your email address will not be published. Required fields are marked *