ಸತ್ವಪರೀಕ್ಷೆಯ ಸಮಯ
ನಲುಗಿಹೋಗಿದೆ ಜನಹೃದಯ
ಬೇಕಿದೆ ಎಲ್ಲರಿಗು ಭರವಸೆಯ ಸೂರ್ಯ
ಪರಸ್ಪರರಿಗೆ ಬೆಂಬಲದ ಕಾರ್ಯ
ಕೋರೋನ ವ್ಯಗ್ರತೆಗೆ ಗೊತ್ತಿಲ್ಲ ನಿಖರ ಕಾರಣ
ಅಸಮತೋಲನದಿ ಇಂದು ಬದುಕು ಹೈರಾಣ
ಒಬ್ಬರಿಂದೊಂಬ್ಬರು ದೂರದಲಿ ಇರೋಣ
ನಿರೀಕ್ಷಿಸುತ ನೆಮ್ಮದಿಯ ಆಶಾ ಕಿರಣ
ಶಾಂತವಾಗಲಿ ಕೊರೋನ
ಇದೊಂದೇ ಇಂದು ವಿಜ್ಞಾಪನ
ಆಗಬೇಕಿದೆ ಇದಕೆ ದಿವ್ಯತೆಯ ಸ್ಪಂದನ
ಅಂಧಕಾರವು ನೀಗಿ ಬರಲಿ ಬೆಳಕಿನ ದಿನ