ಒಪ್ಪಾಗಿ ಜಡೆಹೆಣೆದು ಕನ್ನಡಿಯಲಿ ನೋಡೆ
ಕಪ್ಪುಹೆರಳೆಡೆಯಿಂದ ಕಂಡ ನರೆಗೂದಲಿನಂತೆ!
ಲೇಸಲ್ಲಿ ಪಾಲ್ಗೊಳಲೆಂದು ಬೀಸಾಗಿ ನಡೆದಾಗ
ಕಾಲು ಒಮ್ಮೆಲೆ ಕುಸಿದು ಕಾಡಿದ ಉಳುಕಿನಂತೆ!
ಕಜ್ಜಾಯದ ಸವಿಯ ಚಪ್ಪರಿಸುತಿರುವಾಗ
ಬೆಲ್ಲದಲಿದ್ದ ಕಲ್ಲು ‘ಕುಟುಂ’ ಎನುತ ಚುಚ್ಚಿದಂತೆ!
ಕೈಕಾಲು ಸಡಿಲಿಸಲೆಂದು ವಿಹಾರಕ್ಕೆ ನಡೆದಾಗ
ಕಚ್ಚುತ್ತ ಬಿಡದೆ ಗುಂಯ್ಗುಡುವ ಸೊಳ್ಳೆಯಂತೆ!
ಜೀವನದಿ ಸಮ್ಮಿಳಿತ ಲಘು ರಸಭಂಗ ಪ್ರಸಂಗ
ಸಂತುಲನ ಸಾಧನೆಗೆ ಲಘುವೇ ಗುರುವೆಂಬಂತೆ!