Posted in ಕವನ

ಭರತ ನಾಟ್ಯ

ನೃತ್ಯೋಲ್ಲಾಸದ ಚಿಗುರೆ
ನವವಿನ್ಯಾಸ ಚದುರೆ
ನೀನಿಂದು ಲಾಸ್ಯದಲಿರೆ
ಮನ ತುಂಬ ಸಂತಸದ ತೆರೆ

ಅಭ್ಯಾಸದ ದಿನಗಳಿದ್ದರೂ ಕಠಿಣ
ಆಯಾಸ ಮರೆಸಿ ಸಹಪಾಠಿ ಗಡಣ
ಅನುನಿತ್ಯ ಬಗೆಬಗೆ ನೃತ್ಯಾವರ್ತನ
ಅಣಿಯಾಗಿ ಇಂದು ಈ ಪ್ರದರ್ಶನ

ಪ್ರಣಾಮವ ಸಲಿಸುತ ನಟರಾಜ ಶಿವಗೆ ಹೃತ್ಪೂರ್ಣ ನಮಿಸುತ್ತ ಸನಾತನ ಗುರುವೃಂದಕೆ
ಬೇಡುತಿಹರು ವಿದುಷಿಯರು ಶುಭಹಾರೈಕೆ
ಸ್ವಾಗತವು ತಮಗೆ ನೃತ್ಯ ಕಾರ್ಯಕ್ರಮಕೆ

Leave a Reply

Your email address will not be published. Required fields are marked *