ಮುಗ್ಧತೆಯ ಮೂಟೆ
ಸ್ನಿಗ್ಧತೆಯ ಸಿರಿ ಪುಟ್ಟೆ
ದುಗ್ಧ ಎಳೆ ಬೊಮ್ಮಟೆ!
ತಲೆಯಲ್ಲೆರಡು ಜುಟ್ಟು
ಕಾಲಲ್ಲಿ ಪಿಂಕು ಬೂಟು
ಕೆಂಪು ಫ್ರಾಕನು ತೊಟ್ಟು!
ಮಲ್ಲಿಗೆ ನಗುವನು ಹೊದ್ದು
ಕಣ್ಣಂಚಲಿ ನೋಡುವೆ ಕದ್ದು
ಎಲ್ಲಿಂದ ಬಂದಿಹೆ ನೀ ಮುದ್ದು?
ತೋರುತಿಹೆಯ ಬಂದ ದಾರಿ
ಹಿಗ್ಗು ಹೊತ್ತು ತಂದೆ ಈ ಪರಿ
ಸುತ್ತಲುಕ್ಕುಕ್ಕಿ ಹರಿದಿದೆ ನಗೆಝರಿ
ಹೊಳೆಯಿಸಿತು ಈ ನಿಮಿಷ
ಇಚ್ಛಿತ ಗಮ್ಯದ ಸಾದೃಶ್ಶ
ನೋಟವಿದು ಸ್ವರ್ಗ ಸದೃಶ!