ಎಲೆಯೊಂದರಲಿ ಐದು ಎಲೆ
ಒಗ್ಗೂಡಿರಲು ಅಷ್ಟು ಅಂದದಲೆ
ನಡುವೆ ಕಂಡು ಸಿಂಧೂರ ಬೈತಲೆ
ಬಹುಕಾಲ ಬಾಳ್ವೆ ವನವಾಸದಲೆ
ಬೆಂದು ಮಿಂದು ನಿಸರ್ಗದಲೆ
ಅಭಿಮಾನ ಮಾನ ಕಾಯುತಲೆ
ಪಂಚಪಾಂಡವರೊಡಗೂಡುತಲೆ
ಸ್ವಂತಿಕೆಯ ಶ್ರೀಮಂತ ನೆಲೆ
ವಿಶಿಷ್ಟ ವ್ಯಕ್ತಿತ್ವ ಸಬಲ ಬಾಲೆ
ಅದುಮಲಾಗದ ಸ್ಫೂರ್ತಿ ಸೆಲೆ
ದಿಟ್ಟೆ ಧೀರೆ ನೀ ಅಚಂಚಲೆ
ಪ್ರಕೃತಿಯ ಕಲಾವಿಲಾಸಬಲೆ
ರೂಪದರ್ಶಿ ನಿನ್ನ ಆಕರ್ಷಣೆಯಲೆ
ಮಾರು ಹೋಗಿ ಕಲಾಶಾಲೆ
ಪರ್ಣ ಪ್ರತೀಕ ತೋರುತಿಹಳೇ?
-ಸುಮನಾ