ನಿನ್ನ ಪ್ರೀತಿಯ ಛತ್ರಛಾಯೆಯಲಿ
ಗಣಿಸದೆ ಉರಿಬಿಸಿಲು ಜಡಿಮಳೆ ಬಿರುಗಾಳಿ
ಗುನುಗುತ್ತ ಹಾಡುತ್ತ ಸಂತಸದ ಚೆನ್ನುಲಿ
ನಿನ್ನ ಪ್ರೋತ್ಸಾಹದ ಛತ್ರಛಾಯೆಯಲಿ
ಕೈಗೊಳುವೆ ಕಾರ್ಯಗಳ ಉತ್ಸಾಹದಲ್ಲಿ
ಮಗ್ನತೆಯು ದೊರಕಿ ಅಧ್ಯಯನದಲ್ಲಿ
ಹಗುರವಾಗುವೆ ಅರ್ಥೈಸಿದ ಸುಳಿವಿನಲ್ಲಿ
ನಿನ್ನ ಆಸರೆಯ ಛತ್ರಛಾಯೆಯಲಿ
ನಾನು ವಿರಮಿಸುವೆ ನಿರಾಳ ಭಾವದಲಿ
ತಾಯಿ ಮಡಿಲ ಎಳೆಮಗುವಂದದಲಿ
ಶಾಂತ ಅನುಭವವು ಅಂತರಾಳದಲಿ
-ಸುಮನಾ