ಅಭಿನಂದನೆ ಅಭಿವಂದನೆ
ಅಪ್ರತಿಮ ಸಾಧನೆಯ ವಿಜ್ಞಾನಿಗಳಿಗೆ
ಆದ್ವಿತೀಯ ಮಹಾನ್ ಸಂಶೋಧನೆಗೆ
ಅಭಿಮಾನದಲಿ ಗೌರವ ಅರ್ಪಣೆ
ಅಸಾಮಾನ್ಯವು ಅಸಾಧಾರಣವು
ಕೋವಿಡ್ ಲಸಿಕೆಯ ಆವಿಷ್ಕಾರವು
ಅವಿರತ ತಪಸ್ಸಿನ ಸಾಧನೆಯು
ಅಚಂಚಲ ಪ್ರಯತ್ನದ ಶೋಧನೆಯು
ಆ ಧನ್ವಂತರಿಯ ಆಶೀರ್ವಾದವು
ಆ ದಿವ್ಯದ ಸುಪ್ರೇರಣೆಯು
ಅಗೋಚರದ ಸುಪ್ರಕಾಶನವು
ಅಪ್ರಕಟದ ಅದ್ಭುತ ಪ್ರಕಟಣೆಯು
ಆದರದಿ ಪ್ರಶಂಶಿಸುತ ಸಂಶೋಧನೆಗೆ
ಮೇಲೆ ನಭದಿ ದೇವದುಂದುಭಿ ಮೊಳಗೆ
ಎಲ್ಲೆಲ್ಲೂ ಹರ್ಷೋದ್ಗಾರದ ಘಳಿಗೆ
ಉಘೇ ಉಘೇ ಉಘೇ ವಿಜ್ಞಾನಿಗಳಿಗೆ